ಉಡುಪಿ : ಮಂಗಳೂರು ವಿಶ್ವವಿದ್ಯಾಲಯವು 2023-24ನೇ ಸಾಲಿನ ಪದವಿ ವಿಭಾಗ ಮತ್ತು ಸ್ನಾತ ಕೋತ್ತರ ಪದವಿ ವಿಭಾಗದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಬಿಎಸ್ಸಿ ವಿಭಾಗಕ್ಕೆ ಒಂದು, ಬಿಬಿಎ ವಿಭಾಗಕ್ಕೆ ಮೂರು ರ್ಯಾಂಕ್ ಮತ್ತು ಎಂ.ಕಾಮ್ ವಿಭಾಗಕ್ಕೆ ಎರಡು ರ್ಯಾಂಕ್ ಲಭಿಸಿದೆ.
ಎಂ.ಕಾಮ್ ವಿಭಾಗದಲ್ಲಿ ಕು. ಪ್ರೀತಿ ಪ್ರಥಮ ರ್ಯಾಂಕ್ ಮತ್ತು ಕು. ಜೆನಿಷಿಯಾ ಡಿಸೋಜಾ ಅವರಿಗೆ ಆರನೇ ರ್ಯಾಂಕ್ ಲಭಿಸಿದೆ. ಹಾಗೂ ಬಿಎಸ್ಸಿ ವಿಭಾಗದಲ್ಲಿ ಕು.ನಿಕ್ಷಿತಾ.ಸಿ ದ್ವಿತೀಯ ರ್ಯಾಂಕ್, ಬಿಬಿಎ ಯಲ್ಲಿ ಮಾನುಷ್.ಎಮ್.ಕೋಟ್ಯಾನ್ ದ್ವಿತೀಯ ರ್ಯಾಂಕ್, ಕು. ಅಶ್ವಿನಿ ನಾಯ್ಕ್ ಏಳನೆಯ ರ್ಯಾಂಕ್, ಕು. ಆಯಿಷಾ ಕಾನುಮ್ ಇವರಿಗೆ ಎಂಟನೆಯ ರ್ಯಾಂಕ್ ಲಭಿಸಿದೆ.
ವಿಜೇತ ವಿದ್ಯಾರ್ಥಿಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಆಡಳಿತ ಮಂಡಳಿಯವರು, ಪ್ರಾಂಶುಪಾಲರಾದ ಡಾ. ರಾಮು ಎಲ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದರು.