ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಮಹಿಳಾ ದಿನಾಚರಣೆಯು ಇತ್ತೀಚೆಗೆ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಜರುಗಿತು. ಮಾಹೆ ಮಣಿಪಾಲದ ಲೆಕ್ಕಪತ್ರ ಹಾಗೂ ಹಣಕಾಸು ವಿಭಾಗದ ನಿರ್ದೇಶಕರಾಗಿರುವ ಸರಸ್ವತಿ ಕೆ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸರ್ಜರಿ ವಿಭಾಗದ ಯೂನಿಟ್ ಮುಖ್ಯಸ್ಥರಾದ ಡಾ. ಬದರೀಶ್ ಎಲ್. ಹಾಗೂ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ರಂಜನ್ ಕಲ್ಕೂರ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಶ್ರೀಮತಿ ಸರಸ್ವತಿ ಯವರು ಮಾತನಾಡುತ್ತ ಹೆಣ್ಣು ಅಬಲೆಯಲ್ಲ ಆಕೆ ಸಬಲೆ. ಪುರುಷರಿಗೆ ಸಮಾನವಾಗಿ ಆಕೆ ನಿಲ್ಲಬಲ್ಲಳು. ಈಕೆ ಸಮಾಜದ ಒಂದು ದೊಡ್ಡ ಆಸ್ತಿ. ಮಹಿಳೆಗೆ ಮನೆಯವರೆಲ್ಲರ ಪ್ರೋತ್ಸಾಹ, ಬೆಂಬಲದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು ಹಾಗೂ ಪರಿಷತ್ತಿನ ಕಾರ್ಯವೈಖರಿಯನ್ನು ಸ್ತ್ರೀ ಸಮಾಜದ ಮೇಲಿನ ಕಾಳಜಿಯನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರಾದ ಸಮಾಜ ಸೇವಕಿ ಶ್ರೀಮತಿ ಪಿ. ಆರ್. ಯಶೋಧ, ಸಂಗೀತ ಗುರುಗಳಾದ ವಿದುಷಿ ಉಷಾ ಹೆಬ್ಬಾರ್ ಮತ್ತು ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ವಿದುಷಿ ಲಕ್ಷ್ಮಿ ಗುರುರಾಜ್ ಇವರನ್ನು ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿದುಷಿ ಲಕ್ಷ್ಮಿ ಗುರುರಾಜ್ ರವರು ಮಾತನಾಡಿ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ಹಾಗೂ ಹೆಮ್ಮೆ ವ್ಯಕ್ತಪಡಿಸಿದರು. ಆಶಾ ರಘುಪತಿ ರಾವ್, ಅನುಪಮಾ, ರಮ್ಯ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು. ರಾಧಿಕಾ ಚಂದ್ರಕಾಂತ್, ರೂಪಶ್ರೀ ಭಟ್, ಸುನೀತಾ ಚೈತನ್ಯ, ದಿವ್ಯ ಪಾಡಿಗಾರ್, ಶಶಿಪ್ರಭಾ ಕಾರಂತ್ ಸಹಕರಿಸಿದರು. ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಕರ್ನಾಟಕ ಬ್ಯಾಂಕ್ ಎ.ಜಿ.ಎಂ. ವಾದಿರಾಜ ಭಟ್ ಉಪಸ್ಥಿತರಿದ್ದರು. ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ್ ಕೆ. ಎನ್. ಪ್ರಸ್ತಾವಿಸಿ ಸ್ವಾಗತಿಸಿದರು. ಅಮಿತಾ ಕ್ರಮದಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸದಸ್ಯೆಯರಿಂದ ಮನೋರಂಜನಾ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆಯಿತು.