ಉಡುಪಿ : ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ), ಮತ್ತು ಸ್ನಾತಕೋತ್ತರ ಕೇಂದ್ರ ಉಡುಪಿ ಇದರ ಆಶ್ರಯದಲ್ಲಿ ದಿನಾಂಕ ೨೨-೦೪-೨೦೨೫ ರಂದು ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಪ್ರಜ್ಞಾ ೨೦೨೫’ರ ಸಮಾರೋಪ ಸಮಾರಂಭ ನೆರವೇರಿತು.
ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಎಲಯನ್ಸ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ಕಾನೂನು ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ. ಮುಕುಲ್ ಸಕ್ಸೇನ ಅವರು ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕರ‍್ಯಾಧ್ಯಕ್ಷರಾಗಿರುವ ಡಾ. ಎಂ. ಆರ್. ಹೆಗಡೆ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಂತೋಷ್ ಕುಮಾರ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್, ಪ್ರಜ್ಞಾ ಉತ್ಸವದ ಮುಖ್ಯ ಸಂಯೋಜಕರಾದ ಡಾ ರಮೇಶ್ ಟಿ. ಎಸ್., ಸಹಸಂಯೋಜಕಿ ಶ್ರೀಮತಿ ಜಯಲಕ್ಷಿö್ಮÃ, ಪ್ರಜ್ಞಾ ಉತ್ಸವದ ಸಾಂಸ್ಕೃತಿಕ ಸಂಯೋಜಕರಾಗಿರುವ ಶ್ರೀಮತಿ ಪ್ರತಿಭಾ ಭಟ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಹಅಧಿಕಾರಿಗಳಾಗಿರುವ ಡಾ. ಸಂತೋಷ್ ಕುಮಾರ್, ಶ್ರೀಮತಿ ಸುಮಲತಾ, ಐಕ್ಯುಎಸಿ ಸಂಯೋಜಕರಾಗಿರುವ ಡಾ. ವಿನಯ್ ಕುಮಾರ್ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜ್ಞಾ ಉತ್ಸವದ ಶೈಕ್ಷಣಿಕ ಸಂಯೋಜಕರಾಗಿರುವ ಶ್ರೀಮತಿ ಪ್ರತಿಭಾ ಆಚರ‍್ಯ ಸ್ವಾಗತಿಸಿದರು. ಪ್ರಜ್ಞಾ ಉತ್ಸವದ ಸಾಂಸ್ಕೃತಿಕ ಸಂಯೋಜಕರಾಗಿರುವ ಡಾ. ಮಂಜುನಾಥ ಕರಬ ವಂದಿಸಿದರು. ವಿದ್ಯಾರ್ಥಿನಿಯರಾಗಿರುವ ಸಂಪ್ರೀತಾ ಹಾಗೂ ಶ್ರೀಪ್ರದಾ ಪ್ರಾರ್ಥಿಸಿದರು. ವಾಣಿಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಮಲಾಕ್ಷಿ ಹಾಗೂ ಆಂಗ್ಲಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಿತಾ ನಿರೂಪಿಸಿದರು.
ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ತಂಡವು ಪ್ರಜ್ಞಾ ಉತ್ಸವದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿಭಾಗಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು, ಸಮಗ್ರ ತಂಡಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಮೂಡುಬಿದಿರೆಯ ಆಳ್ವಾಸ್ ಕಾಲೇಜು ಶೈಕ್ಷಣಿಕ ವಿಭಾಗ ಹಾಗೂ ಸಮಗ್ರ ತಂಡಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಾಂಸ್ಕೃತಿಕ ವಿಭಾಗದಲ್ಲಿ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.