Header Ads Widget

ಜನಿವಾರ ಪ್ರಕರಣ ತೀವ್ರ ಖಂಡನೀಯ ~ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಯ ಸಿ.ಇ‌.ಟಿ. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದೆ. ಜನಿವಾರ ಎಂದರೆ ಅದು ಕೇವಲ ಮೂರು ಎಳೆಗಳ ಹತ್ತಿಯ ದಾರ ಮಾತ್ರ ಅಲ್ಲ. ಅದು ವಿಪ್ರರೂ ಸೇರಿದಂತೆ ಆರ್ಯ ವೈಶ್ಯರು, ಕ್ಷತ್ರಿಯ ಸಮುದಾಯದವರ ಆಚಾರ, ವಿಚಾರ, ಅನುಷ್ಠಾನ ದ ಸಂಕೇತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಸದ್ದು ಮಾಡಿದೆ. ನಾವೂ ಪ್ರಕರಣ ಖಂಡಿಸುತ್ತೇವೆ ಮತ್ತು ಈ ಬಗ್ಗೆ ರಾಜ್ಯ ಸರ್ಕಾರವು ಕಠಿಣ ಕ್ರಮವನ್ನು ವಹಿಸಿ ರುವುದನ್ನು ಸ್ವಾಗತಿಸಿದ್ದೇವೆ. ಇನ್ನು ಮುಂದೆ ಈ ರೀತಿ ಪ್ರಸಂಗಗಳು ಯಾವುದೇ ಧಾರ್ಮಿಕ ಸಂಕೇತಗಳ ನಡೆಯಬಾರದು ಎಂದು ಸಂದೇಶ ನೀಡುತ್ತ ಇದ್ದೇವೆ.

ಪ್ರಕರಣದಲ್ಲಿ ನೊಂದವರ ಪರವಾಗಿ ಶ್ರೀ ಮಠ ಇದೆ. ಆ ವಿದ್ಯಾರ್ಥಿಯ ಶೈಕ್ಷಣಿಕ ಬದುಕಿಗೆ ಸದರಿ ಪ್ರಸಂಗದಿಂದ ಯಾವುದೇ ಅನ್ಯಾಯ‌ ಆಗಬಾರದು. ಈ ದಿಸೆಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸುತ್ತೇವೆ.


 ~ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ.

ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನ

ಮೈಸೂರು.