Header Ads Widget

ಡಾ ನಿ ಬೀ ವಿಜಯ ಬಲ್ಲಾಳರಿಗೆ ರಾಮವಿಠಲಾನುಗ್ರಹ ಪ್ರಶಸ್ತಿ ಪ್ರದಾನ

ಪೆರ್ಣಂಕಿಲದಲ್ಲಿ ಇತ್ತೀಚೆಗೆ ನೆರವೇರಿದ ಭಕ್ತಿ ಸಿದ್ಧಾಂತೋತ್ಸವ ರಾಮೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾಧಕರ ಸಂಮಾನದಂತೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ ನಿ ಬೀ ವಿಜಯಬಲ್ಲಾಳರಿಗೆ ಧಾರ್ಮಿಕ ಕ್ಷೇತ್ರದಲ್ಲಿ ನಡೆಸಿದ ಸಾಧನೆಗಳಿಗಾಗಿ ಶ್ರೀ ರಾಮ‌ವಿಠಲಾನುಗ್ರಹ ಪ್ರಶಸ್ತಿಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಉಡುಪಿ ಪೇಜಾವರ ಮಠದಲ್ಲಿ ಪ್ರದಾನಿಸಿ ಆಶಿರ್ವದಿಸಿದರು. ಪೆರಣಂಕಿಲದ ಕಾರ್ಯಕ್ರಮದಲ್ಲಿ ಡಾ ಬಲ್ಲಾಳರಿಗೆ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ .‌