Header Ads Widget

ಅಖಿಲ ಭಾರತ ಅಂತರ ವಿವಿ ಖೋಖೋ: ಫೈನಲ್‌​ ನಲ್ಲಿ ಕಾದಾಡಲಿರುವ ಮಂಗಳೂರು ವಿವಿ ​ ​

ಉಡುಪಿ​:​   ಮಹಾರಾಷ್ಟ್ರ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ ತಂಡವನ್ನು 21-17 ಅಂಕಗಳ ಅಂತರ ದಿಂದ ಸುಲಭವಾಗಿ ಸೋಲಿಸಿದ ಆತಿಥೇಯ ಮಂಗಳೂರು ವಿವಿ, ನಗರದ ಪೂರ್ಣಪ್ರಜ್ಞ ಕಾಲೇಜಿನ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ ಟೂರ್ನಿಯ ಫೈನಲ್‌ಗೆ ತೇರ್ಗಡೆಗೊಂಡಿದೆ.    


ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ, ಕಳೆದ ಬಾರಿ ತನ್ನೊಂದಿಗೆ ಜಂಟಿ ಯಾಗಿ ಮೂರನೇ ಸ್ಥಾನ ವನ್ನು ಹಂಚಿಕೊಂಡಿದ್ದ ಮುಂಬಯಿ ವಿವಿಯನ್ನು ಎದುರಿಸಲಿದೆ. ದಿನದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಂಬಯಿ ವಿವಿ, ಮಹಾರಾಷ್ಟ್ರ ಸಾಂಭಾಜಿ ನಗರದ ಡಾ.ಬಿಎಎಂ ವಿವಿ ತಂಡವನ್ನು 14-13 ಅಂತರದಿಂದ ​ಸೋಲಿಸಿತ್ತು.


 ಕ್ವಾರ್ಟರ್‌ಫೈನಲ್‌ನಲ್ಲಿ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ ತಂಡ, ಕರ್ನಾಟಕದ ದಾವಣಗೆರೆ ವಿವಿ ಯನ್ನು 13-12ರಿಂದ ಸೋಲಿಸಿ ಪೈನಲ್‌ಗೆ ನೆಗೆಯಿತು.​ ಅಂತಿಮ ಎಂಟರ ಹಂತದ ಪಂದ್ಯಗಳಲ್ಲಿ ಮಹಾರಾಷ್ಟ್ರದ ಡಾ.ಬಿಎಎಂ ವಿವಿ, ಪಂಜಾಬ್‌ನ ಲವ್ಲೀ ಪ್ರೊಪೇಷನಲ್ ವಿವಿ ತಂಡವನ್ನೂ 13-12ರ ಅಂತರದಿಂದ ​ಹಾಗು ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬಯಿ ವಿವಿ, ದಿಲ್ಲಿ ವಿವಿ ತಂಡವನ್ನು 29-28ರ ಅಂತರದಿಂದ ಪರಾಭವಗೊಳಿಸಿತು.  ಫೈನಲ್ ಪಂದ್ಯ ಎ.12ರ ಶನಿವಾರ ಬೆಳಗ್ಗೆ 9:30ಕ್ಕೆ ನಡೆಯಲಿದೆ.