Header Ads Widget

ಉಡುಪಿ : ಭಯೋತ್ಪಾದಕ ದಾಳಿಯ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ನ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಉಡುಪಿಯ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಮೊಂಬತ್ತಿಯನ್ನು ಬೆಳಗಿಸಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಕಾಶ್ಮೀರದಲ್ಲಿ ನಡೆದಂತಹ ಉಗ್ರರ ಅಟ್ಟಹಾಸದಿಂದ ದೇಶದ 140 ಕೋಟಿ ಜನ ತಲೆತಗ್ಗಿಸುವಂತಾಗಿದೆ.ಹೆಚ್ಚಿನ ಭದ್ರತೆ ಇರಬೇಕಾದ ಸ್ಥಳದಲ್ಲಿ ಉಗ್ರರಿಂದ ಇಂತಹ ಘೋರ ಕೃತ್ಯಗಳು ಆಗಿಂದಾಗ್ಗೆ ನಡೆಯಲು ಕಾರಣವೇನುಂಬುದನ್ನು ಸರಿಯಾಗಿ ವಿಶ್ಲೇಷಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೆಯೇ ಉಗ್ರರು ನಡೆಸಿರುವ ಭೀಕರ ದಾಳಿಗೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎಂ ಎ. ಗಪೂರ್ ಮಾತನಾಡಿ ದೇಶದ ಜನತೆ ಶಾಂತಿ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಆಡಳಿತಾರೂಢ ಸರ್ಕಾರದ್ದಾಗಿದೆ.ಉಗ್ರರ ಅಟ್ಟಹಾಸದ ಹಿನ್ನೆಲೆಯಲ್ಲಿ ಯಾವುದೇ ಧರ್ಮವನ್ನು ದೂಷಿಸುವ ಕೆಲಸವನ್ನು ಯಾರೂ ಮಾಡದೇ ಎಲ್ಲರೂ ಸೌಹಾರ್ದತೆಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಸಾದ್ ರಾಜ್ ಕಾಂಚನ್, ಹರೀಶ್ ಕಿಣಿ,ಪ್ರಖ್ಯಾತ್ ಶೆಟ್ಟಿ,ಬಿ.ಕುಶಲ್ ಶೆಟ್ಟಿ,ನಾಗೇಶ್ ಉದ್ಯಾವರ,ಮಹಾಬಲ ಕುಂದರ್, ಸರ್ಪುದ್ದೀನ್ ಶೇಖ್, ಹಬೀಬ್ ಅಲಿ, ಗಣೇಶ್ ನೆರ್ಗಿ,ಸಜ್ಜನ್ ಶೆಟ್ಟಿ, ಸೌರಭ್ ಬಲ್ಲಾಳ್, ಪ್ರಮೀಳಾ ಜತ್ತನ್ ,ಜ್ಯೋತಿ ಹೆಬ್ಬಾರ್, ಮೀನಾಕ್ಷಿ ಮಾಧವ, ಸಂಧ್ಯಾ ತಿಲಕ್ ರಾಜ್,ಶರತ್ ಶೆಟ್ಟಿ, ಸತೀಶ್ ಕುಮಾರ್ ಮಂಚಿ,ಭರತ್ ಮಣಿಪಾಲ, ಚಂದ್ರಮೋಹನ್, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಕೃಷ್ಣ ಹೆಬ್ಬಾರ್, ಸುರೇಂದ್ರ ಆಚಾರ್ಯ, ಮೊಹಮ್ಮದ್ ನಾಸಿರ್,ಯಾದವ ಕೊಳ, ಮೊಹಮ್ಮದ್, ಜಯರಾಮ್ ಪರ್ಕಳ, ಅನಿತ ಡಿಸೋಜ, ಚಂದ್ರಿಕಾ ಶೆಟ್ಟಿ, ಅರ್ಚನಾ ದೇವಾಡಿಗ,ಸುಕನ್ಯಾ ಪೂಜಾರಿ,ಸುಪ್ರೀತಾ, ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸ್ವಾಗತಿಸಿದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.ಸತೀಶ್ ಕೊಡವೂರು ನಿರೂಪಿಸಿದರು.