ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದ್ದೊಡ್ಡಣಗುಡ್ಡೆ, ಉಡುಪಿ. ಇಲ್ಲಿ ಮೂತ್ರಪಿಂಡದ ತೊಂದರೆಗೆ ಒಳ ಗಾಗಿರುವವರಿಗೆ ಡಯಾಲಿಸಿಸ್ ಸೌಲಭ್ಯ ಏಪ್ರಿಲ್ 26, 2025 ರಿಂದ ಆರಂಭವಾಗಲಿದೆ.
ಈ ಯೋಜನೆಗೆ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು, ತಮ್ಮ CSR ಉಪಕ್ರಮದ ಭಾಗವಾಗಿ 2 ಅತ್ಯಾಧುನಿಕ ಡಯಾಲಿಸಿಸ್ ಯಂತ್ರವನ್ನು ಉದಾರವಾಗಿ ದೇಣಿಗೆ ನೀಡಿರುತ್ತಾರೆ.
ಈ ನೂತನ ಡಯಾಲಿಸಿಸ್ ಘಟಕದ ಸಾಂಕೇತಿ ಕವಾಗಿ ಉದ್ಘಾಟನೆಯನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶನಿವಾರದಂದು ನೇರೆವೇರಿಸಿದರು
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇದರ ಪದಾಧಿಕಾರಿಗಳಾದ ಶ್ರೀ ಕೃಷ್ಣ ಮೋಹನ್ ಪೈ, ಸತ್ಯೇಂದ್ರ ಪೈ ಹಾಗೂ ಧರ್ಮೇಂದ್ರ ಮಲ್ಯ ಅವರು ಭಾಗವಹಿಸಿದ್ದರು.
ಡಯಾಲಿಸಿಸ್ ಕೇಂದ್ರದಲ್ಲಿ ಸಲಹೆ ಮತ್ತು ಚಿಕಿತ್ಸೆಗೆ ಡಾ. ಮೇಘಾಪೈ ನೆಫ್ರಾಲಜಿಸ್ಟ್ ಇವರು ಲಭ್ಯ ರಿರುತ್ತಾರೆ, ರೋಗಿಗಳಿಗೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಲಭ್ಯವಿದೆ.
ಈ ಡಯಾಲಿಸಿಸ್ ಸೇವೆಯು ಅಗತ್ಯವಿರುವವರು ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ಹೊಸದಾಗಿ ಆರಂಭಿಸಿರುವ ಈ ಸೌಲಭ್ಯವನ್ನು ಉಪ ಯೋಗಿಸಿಕೊಳ್ಳಬಹುದು ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ ಪಿವಿ ಭಂಡಾರಿ ಯವರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗೆ ಆಸ್ಪತ್ರೆಯ ದೂರವಾಣಿ ಸಂಖ್ಯೆ :- 08202535299/ 9242821215 ಸಂರ್ಪಕಿ ಸಬಹುದು