Header Ads Widget

ಯುಪಿಎಂಸಿ- ಅಗತ್ಯ ಕೌಟಂಬಿಕ ಮೌಲ್ಯಗಳು - ವಿಶೇಷೋಪನ್ಯಾಸ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಘಟಕದ ವತಿಯಿಂದ ಪದವಿ ವಿದ್ಯಾರ್ಥಿನಿಯರಿಗೆ ದಕ್ಷಿಣ ಭಾರತದ ಅಗತ್ಯ ಕೌಟಂಬಿಕ ಮೌಲ್ಯಗಳು ಎಂಬ ವಿಚಾರದ ಕುರಿತು ವಿಶೇಷೋಪನ್ಯಾಸ ಏಪ್ರಿಲ್ 16ರಂದು ಜರಗಿತು.

ಮಾಹೇ ಮಣಿಪಾಲದ ಅನಾಟಮಿ ವಿಭಾಗದ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ಬಿನ್ಸಿ ಎಂ ಜಾರ್ಜ್ ಮಾತನಾಡುತ್ತಾ ಪ್ರಸ್ತುತ ಕಾಲಘಟ್ಟದಲ್ಲಿ ಯುವಜನತೆಗೆ ಇರುವ ಅಭಿಪ್ರಾಯ, ಕುಟುಂಬದ ಕುರಿತು ಇರುವ ಭಾವನೆ ಮತ್ತು ಮೌಲ್ಯಗಳ ಕುರಿತು ವಿವರಿಸಿದರು. ಹಾಗೆಯೇ ಮನೆಯಲ್ಲಿ ಜರಗುವ ವಿವಿಧ ಕಾರ್ಯಕ್ರಮಗಳು, ಆಚರಣೆಗಳು ವೈವಿಧ್ಯವಾಗಿದೆ ಆದರೆ ನಮ್ಮ ಮೌಲ್ಯಗಳು ಒಂದೇ ತರ ಇರಬೇಕು ಎಂದು ತಿಳಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ದಿಶಾ ಮಹಿಳಾ ಘಟಕದ ಸಂಯೋಕರಾದ ಶ್ರೀಮತಿ ಜಯಲಕ್ಷ್ಮಿ ಜಿ, ಸಹ ಸಂಯೋಜಕಿ ಇಂದಿರಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶರಣ್ಯ ಸ್ವಾಗತಿಸಿದರು, ರಶ್ಮಿತಾ ವಂದಿಸಿದರು, ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.