ಆದರಂತೆ ಇಂದು ಮುಂಜಾನೆ ಅಂದರೆ, ಬೆಳಗಿನ 1:28 ರಿಂದ 1:51 ರವರೆಗೆ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಾಯುಪಡೆಯು ಪಾಕ್ನ ಉಗ್ರರ ಅಡುಗು ತಾಣಗಳನ್ನು ನಾಶ ಮಾಡಿದ್ದು, ಬರೋಬ್ಬರಿ 23 ನಿಮಿಷಗಳಲ್ಲಿ ಉಗ್ರರನ್ನು ಮಟ್ಟ ಹಾಕಿದೆ.
ಇನ್ನು ಭಾರತೀಯ ವಾಯುಪಡೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ನಿಖರ ಮತ್ತು ಸೀಮಿತ ದಾಳಿಗಳನ್ನು ನಡೆಸಲಾಯಿತು.
ಇನ್ನು ಈ ಕಾರ್ಯಾಚರಣೆಯು ಪ್ರಚೋದನಕಾರಿಯಾಗಿರದೆ, ಭಾರತದ ಮೇಲೆ ಭಯೋತ್ಪಾ ದಕ ದಾಳಿಗಳನ್ನು ಯೋಜಿಸುತ್ತಿದ್ದ ಸ್ಥಳಗಳನ್ನು ಮಾತ್ರ ಗುರಿಯಾಗಿಸಲಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ, ಪಾಕಿಸ್ತಾನದ ಯಾವುದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿಲ್ಲ ಎಂದು ವರದಿಯಾಗಿದೆ ಇನ್ನು ಭಾರತೀಯ ಸೇನೆಯ ಅಧಿಕೃತ X ಹ್ಯಾಂಡಲ್ (@ADGPI) ಮೂಲಕ ಪೋಸ್ಟ್ ಮಾಡಿರುವಂತೆ, ಈ ಕಾರ್ಯಾಚರಣೆ ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಂಡಿತು.
ಅಂದರೆ, ಇಂದು ಬೆಳಗಿನ 1:28 ರಿಂದ 1:51 ರವರೆಗೆ ನಡೆದ ಈ ದಾಳಿಯು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿತ್ತು, ಯಾಕಂದರೆ, ಪಹಲ್ಗಾಮ್ ಉಗ್ರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಸಾವನ್ನ ಪ್ಪಿದ್ದರು.