ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬೋಳ್ಳಂಬಳ್ಳಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ 27 ಅಡಿ (ಪೀಠ ಸಹಿತ )ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಪಂಚ ಕಲ್ಯಾಣ ಹಾಗೂ ಪ್ರತಿಷ್ಠಾ ಪೂರ್ವಕ ಮಹಾಮಸ್ತಕಾಭಿಷೇಕ ಹಾಗೂ ಪ್ರತಿಷ್ಠೋತ್ತರ ಮಹಾಮಸ್ತಕಾಭಿಷೇಕವನ್ನು ದಿನಾಂಕ 4 .5 .2025 ರವಿವಾರದಿಂದ 9:05.2025ರ ಶುಕ್ರವಾರದವರೆಗೆ ಶ್ರೀ ಸಂತಾರ ಜೈನ ಮಠ ಹೊಂಬುಚದ ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.
ಸಂಪೂರ್ಣ ಕಾರ್ಯಕ್ರಮವು ಆಚಾರ್ಯ ಶ್ರೀ ಗುಲಾಬೂಷಣ ಮುನಿ ಮಹಾರಾಜರ ಸಾನಿಧ್ಯದೊಂದಿಗೆ ನಡೆಸಲಾಯಿತು. ಪ್ರತಿಷ್ಠ ವಿಧಿ ವಿಧಾನಗಳನ್ನು ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟ ಕಲಂಕ ಭಟ್ಟಾರಕ ಸ್ವಾಮೀಜಿ ಶ್ರೀ ಕ್ಷೇತ್ರ ದಿಗಂಬರ ಜೈನ ಮಠ ಸೊಂದಾ ರವರು ನೆರವೇರಿಸಿದರು.
ಜೊತೆಯಲ್ಲಿ ಸಿದ್ದ ಭಗವಾನ್ ಶ್ರೀರಾಮಚಂದ್ರ ದೇವರು ರಾಜಕುಮಾರವಸ್ಥೆಯ ಏಕಶಿಲಾ 21 ಅಡಿ (ಪೀಠ ಸಹಿತ )ಎತ್ತರದ ಮೂರ್ತಿಯನ್ನು ಜೈನ ಆಗಮೋಕ್ತ ವಿಧಿ ವಿಧಾನಗಳಿಂದ ನೆರವೇರಿಸಲಾಯಿತು.
ದಿನಾಂಕ 9.05.2025 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎರಡು ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು. ಆರು ದಿನಗಳ ಪರ್ಯಂತ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಗಣ್ಯರುಗಳು ಭಾಗವಹಿಸಿದರು.
9 .5. 2025 ರಂದು ಜರುಗಿದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ ಬಿ .ವೈ. ರಾಘವೇಂದ್ರ ಅವರು ಭಾಗವಹಿಸಿ ದೇಶಕ್ಕೆ ಜೈನ ಸಮಾಜದ ಕೊಡುಗೆಗಳನ್ನು ಕೊಂಡಾಡಿದರು .ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ,ಮಾಜಿ ಶಾಸಕ ಗೋಪಾಲ್ ಪೂಜಾರಿ, ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ದೀಪಕ್ ಶೆಟ್ಟಿ ,ಮಾಜಿ ಮಂತ್ರಿಗಳಾದ ಶ್ರೀ ಅಭಯ ಚಂದ್ರ ಜೈನರವರು ,ಅಳದಂಗಡಿ ಸೀಮೆಯ ಅರಸರಾದ ಶ್ರೀ ತಿಮ್ಮಣ್ಣರಸ ಅಜೀಲರು, ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ಮೋಹನ್ ಆಳ್ವ ,ಪ್ರಕಾಶ್ ಚಂದ್ರ ಶೆಟ್ಟಿ ಕಂಬದ್ ಕೋಣೆ ಭರತರಾಜ್ ಮೂಡಾರು, ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಕರುಣಾಕರ್ ಶೆಟ್ಟಿ, ಶೋಭಾ ಶಿವಕುಮಾರ್, ಶ್ರೀಕ್ಷೇತ್ರ ಒಡಂಬೈಲು ಧರ್ಮಾಧಿಕಾರಿಗಳಾದ ಶ್ರೀ ವೀರರಾಜಯ್ಯ , ಶಿವಾನಂದ್ ಪ್ರಭು ಬೈಂದೂರು ,ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ ಉಪ್ಪುಂದ, ಮಹಾಲಿಂಗ ನಾಯಕ್ ಕೊಲ್ಲೂರು ದೇವಸ್ಥಾನದ ಟ್ರಸ್ಟಿ, ಮಯೂರ್ ಕೀರ್ತಿ ವಕೀಲರು. ಜಿನೇಂದ್ರ ವಕೀಲರು. ಬಾಲಕೃಷ್ಣ ಶೆಟ್ಟಿ .ರಾಘವೇಂದ್ರ ಶೆಟ್ಟಿ. ರಾಜಶೇಖರ್ ಹೆಬ್ಬಾರ್ ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷರು .ಡಾಕ್ಟರ್ ರೋಷನ್ ಶೆಟ್ಟಿ ಮಂಗಳೂರು, ಶಾಂತರಾಮ್ ಶೆಟ್ಟಿ ಬಾರ್ಕೂರು, ವಸಂತ್ ಗಿಳಿಯಾರ್, ಅಭಿಜಿತ್ ಎಂ, ವೃಷಭ್ ರಾಜ್ ಕಡಂಬ, ಸಂತೋಷ್ ಕುಮಾರ್ ಜೈನ್, ಪದ್ಮಪ್ರಸಾದ್ ಜೈನ್, ಜಿನೇಶ್ ಪ್ರಸಾದ್, ನೇಮಿರಾಜ್ ಜೈನ್, ಆದಿರಾಜ್ ಜೈನ್ ,ಧರ್ಮಸ್ಥಳದ ಶ್ರೀ ಹರ್ಷೇಂದ್ರ ಹೆಗ್ಗಡೆ, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ಹಾಗೂ ಶ್ರೀಮತಿ ಶ್ರದ್ಧಾ ಅಮಿತ್ ಕುಮಾರ್, ಚೌಟರ ಅರಮನೆ ಕುಲದೀಪ್ ಎಂ, ಆದರ್ಶ್ ಎಂ ಮೂಡಬಿದ್ರೆ, ಪುಷ್ಪರಾಜ್ ಜೈನ್ ಮಂಗಳೂರು, ಸುಗ್ಗಿ ಸುಧಾಕರ್ ಶೆಟ್ಟಿ, ಮನ್ಮತ್ ಕುಮಾರ್ ನೆಲ್ಲಿಕಾರು, ಮಂಜುನಾಥ್ ರಾವ್ ಬಾರ್ಕೂರು, ಸುಭಾಷ್ ಜೈನ್, ಜಯಶೀಲ ಶೆಟ್ಟಿ ಕಾಲ್ತೋಡು, ರತ್ನಾಕರ್ ಜೈನ್ ಮಂಗಳೂರು, ಹರ್ಷೇಂದ್ರ ಜೈನ್ ಮಾಳ, ಸುದರ್ಶನ್ ಇಂದ್ರ ಪಾದೂರು, ನಿರ್ಮಲ್ ಜೈನ್ ಮಂಗಳೂರು, ಮಂಜಯ್ಯ ಕಡಾಟೆ, ಸುರೇಂದ್ರ ಗೌಡ ,ವಿಘ್ನೇಶ್ವರ .ಇತ್ಯಾದಿ ಗಣ್ಯರು ಧಾರ್ಮಿಕ ಸಭಾ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದರು.
ಆಳುಪ ಅರಸು ಮನೆತನಸ್ತ ಹಾಗೂ ಶ್ರೀ ಕ್ಷೇತ್ರ ಬೋಳಂಬಳ್ಳಿ ಧರ್ಮದರ್ಶಿಗಳಾದ ಶ್ರೀ ಧರ್ಮರಾಜ್ ಜೈನ್ ಮತ್ತು ಶ್ರೀಮತಿ ವನಿತಾ ಧರ್ಮರಾಜ್ ಮತ್ತು ಕುಟುಂಬಸ್ಥರಾದ ಅನಿಲ್ ಕುಮಾರ್ ,ಡಾ. ಆಕಾಶ್ ರಾಜ್ ಜೈನ್ ,ಶ್ರೀಮತಿ ಡಾ. ಅಕ್ಷತಾ ಆದರ್ಶ್ ,ಶ್ರೀಮತಿ ಪಾವನ , ಖಜಾಂಚಿ ನಾಗರಾಜ್ ಜೈನ್ ಬೋಳಂಬಳ್ಳಿ ಹಾಗೂ ಇತರೆ ಟ್ರಸ್ಟ್ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು.