ಕಟಪಾಡಿ : ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.) ಕಟಪಾಡಿ ಇವರ 40ನೇ ವರ್ಷದ ಪ್ರಯುಕ್ತ ಏಣಗುಡ್ಡೆ-ಕುರ್ಕಾಲು ರಿಶಾಲ್‌ನಗರದ ಪಂಪಾಕ್ಷೇತ್ರದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನವನಿರ್ಮಾಣಗೊಳ್ಳಲಿರುವ ಬೃಹತ್ ಮಕರಾನ್ನ ಅಮೃತ ಶಿಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಶಿಲಾನ್ಯಾಸ, ನಿಧಿ ಕುಂಭ ಸ್ಥಾಪನೆಯನ್ನು ನೆರವೇರಿಸಿ ಆಶೀರ್ವಚಿಸಿದರು.
ಕ್ಷೇತ್ರದ ತಂತ್ರಿವರ್ಯರಾದ ಮಂಗಳೂರು ಶಕ್ತಿ ನಗರದ ವೇದಬ್ರಹ್ಮಶ್ರೀ ಪ್ರಕಾಶ ವಿ. ಹೊಳ್ಳ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.
ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಗುರುಸ್ವಾಮಿ ಸುರೇಶ್ ಜತ್ತನ್, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ರಿಶಾನ್ ಟಿ. ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಎಲ್. ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ. ಸನಿಲ್ ಅಚ್ಚಡ ಕಟಪಾಡಿ, ಕೋಶಾಧಿಕಾರಿ ಮಂಜುನಾಥ ಅಗ್ರಹಾರ, ಪ್ರಮುಖರಾದ ಕಿಶೋರ್ ಆಳ್ವ ಕೆ. ವಾಸುದೇವ ಶೆಟ್ಟಿ ಕಾಪು, ಪದ್ಮರಾಜ್ ಆರ್. ಪೂಜಾರಿ, ಗೀತಾಂಜಲಿ ಎಂ ಸುವರ್ಣ, ಮುಂಬಯಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ದೈವಾರಾಧಕ ರಾಘು ಪೂಜಾರಿ ಕಲ್ಮಂಜೆ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು