ಆದಿವುಡುಪಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಮೋಘ್ ಕಂಬಳಕಟ್ಟ ಇವರು ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ಶ್ರೀ ಶಾರದಾ ಕಲಾವೇದಿಕೆಯವರು "ಶಾರದಾ ಕಲೋತ್ಸವ" ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ ನ ಅಡಿಟೋರಿಯಂನಲ್ಲಿ ಜೂನ್ 1ರಂದು ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಮಾ ರಂಭಕ್ಕೆ ಮುಖ್ಯ ಅತಿಥಿಗಳಾಗಿ ಹೆಸರಾಂತ ಕಿರುತೆರೆ ಮತ್ತು ಹಿರಿತೆರೆ ನಟಿ ಶ್ರೀಮತಿ ವಿದ್ಯಾ ಮೂರ್ತಿ, ಕಲಾವಿದರು ಮತ್ತು ವಾಗ್ಮಿಗಳು ಆದ ಶ್ರೀ ವೈ. ವಿ. ಗುಂಡೂರಾವ್, ನಿರ್ಮಾಪಕರಾದ ಶ್ರೀ ರವೀಂದ್ರ ತುಂಬುರುಮನೆ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥಾಪಕರಾದ ಶ್ರೀ ಸತ್ಯ ಮಲ್ನಾಡ್, ನಿರ್ವಾಹಕರಾದ ಶ್ರೀಮತಿ ಪೂರ್ಣಿಮಾ ಭಟ್, ರಾಧಾ ಕೇಶವ ಹೆಬ್ಬಾರ್, ಪಲ್ಲವಿ ಭಟ್, ಶರತ್ ಹೆಬ್ಬಾರ್, ಕೇಶವ ಹೆಬ್ಬಾರ್ ಮತ್ತಿತರರು ಉಪಸ್ಥಿತ ರಿದ್ದರು
0 ಕಾಮೆಂಟ್‌ಗಳು