Header Ads Widget

ಹಿರಿಯಡ್ಕ: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಿರಿಯಡ್ಕ ಘಟಕ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ಶ್ರೀ ಬೊಬ್ಬರ್ಯ ಯುವ ಸೇವಾ ಸಮಿತಿ ಹೊಸಂಗಡಿ, ಪೆರ್ಡೂರು, ಲಯನ್ಸ್ ಕ್ಲಬ್ ಹಿರಿಯಡ್ಕ, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ದಿನಾಂಕ : 06-07-2025 ಭಾನುವಾರ, ಮಾಧವ ಮಂಗಲ ಸಭಾಭವನ ಹಿರಿಯಡ್ಕ ದಲ್ಲಿ ಜರುಗಿತು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಜಯಂತ್ ಅಮೀನ್ ಕೋಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊಗವೀರ ಯುವ ಸಂಘಟನೆ ಹಿರಿಯಡ್ಕ ಘಟಕದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಡಿ. ಕುಂದರ್ ರವರು ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕ, ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರವೀಂದ್ರ ಪುತ್ರನ್ ಬೆಳ್ಳಂಪಳ್ಳಿ ಶ್ರೀ ಬೊಬ್ಬರ್ಯ ಯುವ ಸೇವಾ ಸಮಿತಿ ಹೊಸಂಗಡಿ ಇದರ ಅಧ್ಯಕ್ಷರಾದ ಶ್ರೀ ರಘುರಾಮ್ ಸುವರ್ಣ, ಬಜೆ ಮೇಲ್ ಸಾಲು ಮೊಗವೀರ ಸಂಘ ಹಿರಿಯಡಕದ ಅಧ್ಯಕ್ಷರಾದ ಶ್ರೀ ವಿಠ್ಠಲ ಕರ್ಕೆರ ಬೆಳ್ಳಂಪಳ್ಳಿ ಹಿರಿಯಡ್ಕ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಮಹೇಶ್ ಪುತ್ರನ್ ಹಿರೇಬೆಟ್ಟು, ಕಾರ್ಯದರ್ಶಿ ಆಕಾಶ್ ಕಾಂಚನ್, ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಅಧ್ಯಕ್ಷರಾದ ಶ್ರೀ ಸುಧೀರ್ ಹೆಗ್ಡೆ, ಕೆ ಎಂ ಸಿ ರಕ್ತ ನಿಧಿ ವಿಭಾಗದ ಶ್ರೀ ಆಂಡ್ರಸನ್ ಮೊದಲಾದವರು ಉಪಸ್ಥಿತರಿದ್ದರು ಶ್ರೀ ಬಾಲಕೃಷ್ಣ ಬಿಕೆ ಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ನವೀನ್ ಕೆ ಶೆಟ್ಟಿಬೆಟ್ಟು ವಂದಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು