"ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ , ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಡಾ.ಗಣೇಶ್ ಗಂಗೊಳ್ಳಿ ಅಧ್ಯಕ್ಷರು ಜನಪದ ಪರಿಷತ್ ಉಡುಪಿ ಘಟಕ ಇವರು ಹೇಳಿದರು. ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಜನಪದ ಸಾಹಿತ್ಯದ ಪ್ರಕಾರಗಳಾದ ಭತ್ತ ಕುಟ್ಟುವ ಹಾಡು ,ಹೌಂದೆ ರಾಯನ ವಾಲಗ ಮುಂತಾದ ಜಾನಪದ ಪ್ರಕಾರಗಳ ಗಾಯನ ಪ್ರಸ್ತುತಪಡಿಸಿ ಮಾತನಾಡಿದರು.
ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ,ಮತ್ತು ಕುಂದಾಪುರ ಘಟಕದ ವತಿಯಿಂದ "ವಿಕಾಸಕ್ಕಾಗಿ ಜಾನಪದ" ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕುಂದಾಪುರ ಕನ್ನಡದ ಗಾದೆ ಮತ್ತು ಒಗಟುಗಳ ಸ್ಪರ್ಧೆಯಲ್ಲಿವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು.
ಶ್ರೀ ಸಾಮ್ರಾಟ್ ಶೆಟ್ಟಿ ಗೌರವಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ಬಹುಮಾನ ವಿತರಣೆ ನೆರವೇರಿಸಿ,ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ,ಶ್ರೀಮತಿ ಸುಪ್ರೀತಾ ಪುರಾಣಿಕ್,ಅಧ್ಯಕ್ಷರು ಔನಪದ ಪರಿಷತ್ ಕುಂದಾಪುರ,ಶ್ರೀ ರಾಘವೇಂದ್ರ ಪ್ರಭು ಕರ್ವಾಲ್ ಪ್ರಧಾನ ಕಾರ್ಯದರ್ಶಿಗಳು ಜಾನಪದ ಪರಿಷತ್ ಉಡುಪಿ,ಶ್ರೀ ಶ್ರೀಧರ ಪುರಾಣಿಕ್ ಸದಸ್ಯರು ಜಾನಪದ ಪರಿಷತ್,ಶ್ರೀ ಗೋಪಾಲ್ ವಿಷ್ಣು ಭಟ್ ಮುಖ್ಯೋಪಾಧ್ಯಾಯರು ಇವರು ಭಾಗವಹಿಸಿದ್ದರು.
ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ಹಳನಾಡು ,ಅಜಯ್ ಕುಮಾರ್ ಶೆಟ್ಟಿ, ಅಣ್ಣಪ್ಪ .ಎಂ .ಗೌಡ, ರಜನಿ ಹೆಗಡೆ, ರತ್ನ ಜ್ಯೋತಿ, ಸಂತೋಷ್ ಲಕ್ಷ್ಮಿ ಶೆಟ್ಟಿ ಕುಮಾರಿ ಅಶ್ವಿನಿ ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷರಾದ ಡಾ. ಜಾನಪದ .ಎಸ್. ಬಾಲಾಜಿ ರಾಜ್ಯಾಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು.
ಸಹ ಶಿಕ್ಷಕರಾದ ಶ್ರೀಮತಿ ಜ್ಯೋತಿ ಸ್ವಾಗತಿಸಿದರು, ಶ್ರೀಮತಿ ಸುಪ್ರೀತಾ ಪುರಾಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
0 ಕಾಮೆಂಟ್‌ಗಳು