Header Ads Widget

ರಾಜ್ಯದಲ್ಲಿ ಗೋವಿನ ಕೆಚ್ಚಲು ಕೊಯ್ದು ಚಿತ್ರಹಿಂಸೆಯ ಸರಣಿ ಪ್ರಕರಣಗಳು; ಕೆ ಎಂ ಎಫ್ ಮೌನ ಖಂಡನೀಯ

ಅಮೃತಸದೃಶವಾದ ಹಾಲು ನೀಡಿ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ಗೋವುಗಳ ಕೆಚ್ಚಲನ್ನೇ ಕೊಯ್ದು ಗೋವುಗಳಿಗೆ ಚಿತ್ರಹಿಂಸೆ ಹಾಗೂ ಗೋವಿನ ಬಗ್ಗೆ ಪವಿತ್ರ ಭಾವನೆ ಹೊಂದಿರುವ ಜನಸಮುದಾಯಕ್ಕೆ ಇನ್ನಿಲ್ಲದ ಮಾನಸಿಕ ಹಿಂಸೆ ನೀಡುತ್ತಿರುವ ಕಂಡು ಕೇಳರಿಯದ ವಿದ್ಯಮಾನಗಳು ರಾಜ್ಯದಲ್ಲಿ ನಡೆಯುತ್ತಿದೆ . ಆದರೆ ಗೋವಿನ ಹಾಲೇ ತಮ್ಮ‌ ಅಸ್ತಿತ್ವದ ಜೀವಾಳವಾಗಿರುವ ಕೆ ಎಂ ಎಫ್ ನಂಥಹ ರಾಜ್ಯದ ಹಾಲು ಮಾರಾಟ ಒಕ್ಕೂಟಗಳು ಈ ವಿಚಾರದಲ್ಲಿ ಜಾಣಮೌನವಹಿಸಿರುವುದು ಅತ್ಯಂತ ಖಂಡನೀಯ . 

 ಗೋವಿನ ಹಾಲು ಮಾತ್ರ ಬೇಕು ; ಆದರೆ ಗೋವಿನ ಆಕ್ರಂದನ ಮತ್ತು ಹೈನುಗಾರರ ಬವಣೆಗೂ ನಮಗೂ ಸಂಬಂಧವೇ ಇಲ್ಲ ಎಂಬ ಧೋರಣೆ ಸರ್ವಥಾ ಸರಿಯಲ್ಲ . ಗೋವುಗಳಿಗೆ ಈ ರೀತಿಯ ಮಾರಣಾಂತಿಕ ಚಿತ್ರ ಹಿಂಸೆ ಕೊಟ್ಟು , ಗೋವನ್ನು ಸಲಹಿಕೊಂಡು ಹಾಲು ಮಾರಿ ಜೀವನ ಸಾಗಿಸುತ್ತಿರುವ ಸಾವಿರಾರು ಹೈನುಗಾರರ ನೈತಿಕ ಸ್ಥೈರ್ಯಕ್ಕೆ ಸವಾಲೆಸೆಯುವ ಇಂಥಹ ದುಷ್ಕೃತ್ಯಗಳ ವಿರುದ್ಧ ಕೆ ಎಂ ಎಫ್ ಮೊದಲಾಗಿ ನಿಂತು ಧ್ವನಿ ಎತ್ತಬೇಕು .‌ಹಸುಗಳು ಮತ್ತು ಹೈನುಗಾರರಿಲ್ಲದೆ ಕೆ ಎಂ ಎಫ್ ಗಳ ಅಸ್ತಿತ್ವವೇ ಇಲ್ಲ . ಹಾಗಿರುವಾಗ ಗೋವುಗಳ ಮತ್ತು ಗೋಪಾಲಕರ ನೋವಿನ ವಿಚಾರದಲ್ಲಿ ಶೂನ್ಯಸ್ಪಂದನದ ಕೆ ಎಂ ಎಫ್ ಧೋರಣೆ ಅಕ್ಷಮ್ಯ .‌

~ಜಿ ವಾಸುದೇವ ಭಟ್ ಪೆರಂಪಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು