ಕೊಡವೂರು ವಾರ್ಡ್ ನಲ್ಲಿ ಆಶಕ್ತರಿಗೆ ನಡೆಯಲು ಮತ್ತು ದುಡಿಯಲು ಸಾಧ್ಯವಿಲ್ಲದವರಿಗೆ, ದಿವ್ಯಾಂಗರಿಗೆ ಪ್ರತಿ ತಿಂಗಳಿಗೊಮ್ಮೆ ಆಹಾರ ವಿತರಣೆ ಕಾರ್ಯಕ್ರಮ ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯುತ್ತಿದೆ. ದಿವ್ಯಾಂಗ ರಕ್ಷಣಾ ಸಮಿತಿಯು ಈ ಭಾಗದ ಎಲ್ಲಾ ನೋವುಗಳಿಗೆ ಧ್ವನಿಯಾಗುವಂತಹದ್ದು ಆಗುತ್ತಿದೆ. ಅದರ ಜೊತೆಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ಮಾಡುವುದರ ಮುಖಾಂತರ ಕೊಡವೂರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ ಎಂದು ವಿಜಯ ಕೊಡವೂರು ತಿಳಿಸಿದರು.
ಈ ಸಂದರ್ಭದಲ್ಲಿ ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇವರು ಆರ್ಥಿಕವಾಗಿ ಹಿಂದುಳಿದವರಿಗೆ, ದಿವ್ಯಾಂಗರಿಗೆ, ಅಶಕ್ತರಿಗೆ ಪೌಷ್ಟಿಕ ಆಹಾರ ಕಿಟ್ ಕೊಡವಂತಹದ್ದು ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇದರ ಪ್ರಮುಖರಾದ ಶ್ರೀಮತಿ ನಿಧಿ ಎಸ್, ರವಿಚಂದ್ರ, ಪೂಜಾ, ರಶ್ಮಿ, ರೇಷ್ಮಾ, ರತ್ನಾಕರ್, ಪರ್ಲಿ, ವಿಜಯ, ಶ್ವೇತ, ಮೇಘಾರಾಜ್, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಮಹಿಳಾ ಸಮಿತಿಯ ಸದಸ್ಯರಾದ ಶ್ರೀಮತಿ ಗುಣವತಿ, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಹರೀಶ್ ಕೊಪ್ಪಲ್ ತೋಟ, ಕಾರ್ಯದರ್ಶಿ ಜಯ ಪೂಜಾರಿ ಕಲ್ಮಾಡಿ , ಸಮಾಜ ಸೇವಕರಾದ ಅಖಿಲೇಶ್ ಎ, ಯು. ಆರ್. ಡಬ್ಲ್ಯೂ ಸರ್ವೋತ್ತಮ್ ಎಸ್ ಆಮೀನ್, ವಿ ಆರ್ ಡಬ್ಲ್ಯೂ ನಾರಾಯಣ ಶೇರಿಗಾರ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು