Header Ads Widget

ಕಾಪು ಮಹಿಳಾ ಮಂಡಲದ ವತಿಯಿಂದ 'ಆಟಿಡೊಂಜಿ ದಿನ'

ನಮ್ಮ ಹಿರಿಯರಿಗೆ ಪ್ರಕೃತಿಯ ಬಗ್ಗೆ ಅಪಾರವಾದ ಅನುಭವ ಇತ್ತು. ಅದನ್ನು ಬಳಸಿಕೊಂಡು ಅವರು ತಮ್ಮ ಜೀವನೋಪಾಯಕ್ಕಾಗಿ ದಾರಿಯನ್ನು ಹುಡುಕುತ್ತಿದ್ದರು ಎಂದು ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಮುಖ್ಯಸ್ಥರಾದ ಯಶೋದ ಕೇಶವ್ ತಿಳಿಸಿದರು. 

ಅವರು ಕಾಪು ಮಹಿಳಾ ಮಂಡಲದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು..ಆಟಿ ತಿಂಗಳಲ್ಲಿ ಅತಿಯಾದ ಮಳೆ ಬರುವುದರಿಂದ ರೋಗರುಜಿನಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದುಕೊಂಡ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವ ಆಹಾರ ವಸ್ತುಗಳನ್ನು ಬಳಸಿ ಆರೋಗ್ಯಕರವಾದ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಿದ್ದರು.ಆದ್ದರಿಂದ ನಮ್ಮ ಹಿರಿಯರಿಗೆ ಈಗಿನ ಯುವಜನರಲ್ಲಿ ಕಾಣಿಸಿಕೊಳ್ಳುವ ಹೃದಯರೋಗ, ಕ್ಯಾನ್ಸರ್ ನಂತರ ರೋಗಗಳು ಬರುತ್ತಿರಲಿಲ್ಲ.ಆದರೆ ಇಂದಿನ ಯುವಪೀಳಿಗೆ ಫಾಸ್ಟ್ ಫುಡ್ ಗಳನ್ನು ತಿನ್ನುವುದರಿಂದ ತಮ್ಮ ಆರೋಗ್ಯ ವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಬದಲಾವಣೆಯ ಕಾಲಘಟ್ಟದಲ್ಲಿ ಇರುವ ನಮ್ಮ ಜೀವನ ಶೈಲಿ ಯನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಹಿರಿಯರ ಜೀವನ ಶೈಲಿಯನ್ನುಅನುಸರಿಸಿದರೆ ಆರೋಗ್ಯ ಕರವಾದ ವಾತಾವರಣವನ್ನು ನಿರ್ಮಿಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಾಪು ಮಹಿಳಾ ಮಂಡಲದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾಪು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಸ್ವಾಗತ ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅನಿತಾ ಹೆಗ್ಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.ಕೋಶಾಧಿಕಾರಿ ಸರಿತಾ ಶೆಟ್ಟಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಮಹಿಳೆಯರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.. ಕಾರ್ಯಕ್ರಮದ ನಂತರ ಆಟಿಯ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಮಹಿಳೆಯರು ಉಣಬಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು