Header Ads Widget

ಯುವ ವಿಚಾರ ವೇದಿಕೆ ಕೊಳಲಗಿರಿ- "ಆಟಿದ ನೆಂಪು.. ತಿನಸುದ ತಂಪು"

ರಜತ ಸಂಭ್ರಮದಲ್ಲಿರುವ ಕೊಳಲಗಿರಿ ಯುವವಿಚಾರ ವೇದಿಕೆ (ರಿ) ಯವರ 21ನೇ ಕಾರ್ಯಕ್ರಮವಾಗಿ "ಆಟಿದ ನೆಂಪು.. ತಿನಸುದ ತಂಪು" ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ದೈವಾರಾಧಕರಾದ ಮುಖ್ಯ ಅತಿಥಿ ಪಡ್ಡಂ ಸಂಜೀವ ಪಾಣರವರಿಂದ ಯುವ ವಿಚಾರ ವೇದಿಕೆಯಲ್ಲಿ ಉದ್ಗಾಟನೆಗೊಂಡು, ಪಂಚಾಯತ್ ಸದಸ್ಯೆ ಸರೋಜ ಸನಿಲ್, ಸಾಕ್ಸೋಪೋನ್ ವಾದಕ ಪಾಂಡುರಂಗ ಪಡ್ಡಮ್, ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ , ಮಾಧವ ಪಾಣ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಮೇಶ ಕರ್ಕೇರಾ ರವರ ಉಪಸ್ಥಿತಿಯಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಸುಮಾರು ವರ್ಷಗಳ ಹಿಂದೆ ನಮ್ಮ ಉಪ್ಪೂರು ಗ್ರಾಮದಲ್ಲಿ ಹಲವಾರು ಗರ್ಭಿಣಿಯರಿಗೆ ಪ್ರಸೂತಿ ಮಾಡಿಸಿದ್ದ ನರ್ನಾಡು ಗುಲಾಬಿ ಮಡಿವಾಳ್ತಿ ಹಾಗೂ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯಾಗಿ ಸುಧೀರ್ಘಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಶಕುಂತಳ(ಗುಲಾಬಿ ಮಡಿವಾಳ್ತಿಯವರ ಮಗಳು) ರವರನ್ನು ಸನ್ಮಾನಿಸಲಾಯಿತು.

40 ಬಗೆಯ ವಿವಿಧ ಗ್ರಾಮೀಣ ಸೊಗಡಿನ ಖಾದ್ಯಗಳನ್ನು ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ವಿವಿಧ ಗ್ರಾಮೀಣ ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು ಜಯಲಕ್ಷ್ಮಿ ಅವರ ಪ್ರಾರ್ಥನೆಯೊಂದಿಗೆ ಶಾಂತ ಸೆಲ್ವರಾಜ ಅವರ ಸ್ವಾಗತಿಸಿ, ಯೋಗೀಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ಶಕುಂತಳಾ ವಂದಿಸಿದರು. ವೇದಿಕೆಯ ಸದಸ್ಯರು ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ವಿಭಿನ್ನ ಶೈಲಿಯಲ್ಲಿ ಯಶಸ್ವಿಯಾಗಿ ನಡೆಯಿತು..

ಪುಷ್ಪಲತಾ ನರ್ಸರಿಯ ಮಾಲೀಕರಾದ ಕೇಶವ್ ರವರಿಂದ ಗಿಡ ಮರಗಳಿಂದ ರೂಪುಗೊಂಡ ಆಕರ್ಷಕ ಹಸಿರು ನೈಜ ಅಲಂಕಾರ ಬಹಳಷ್ಟು ಮೆಚ್ಚುಗೆ ಪಡೆದು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ತಂದು ಕೊಟ್ಟಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು