ಉಡುಪಿ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆದ ಗುರುದಕ್ಷಿಣೆ ಸಮರ್ಪಣೆ ಹಾಗೂ ಅಭಿನಂದನಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ರಮೇಶ್ ಟಿ. ಎಸ್ ರವರು ದೀಪ ಪ್ರಜ್ವಲನೆ ಮಾಡಿ ಯೋಗ ಸಾಧನೆಗೆ ಪತಂಜಲಿ ಮುನಿಗಳ ಯೋಗ ಸೂತ್ರ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಪತಂಜಲಿ ಮುನಿಗಳ ಬಗ್ಗೆ ವ್ಯಾಖ್ಯಾನ ಮಾಡಿ, ಅಷ್ಟಾಂಗ ಯೋಗದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿ, ದೇಶ,ವಿದೇಶಗಳಲ್ಲಿ ಯೋಗಮಯ ವಾತಾವರಣ ಸ್ರಷ್ಟಿಸಿರುವ ಪರಮಪೂಜ್ಯ ರಾಮದೇವ್ ಜೀ ಮಹಾರಾಜರ ಪತಂಜಲಿ ಸಂಸ್ಥೆ ಹಾಗೂ ಯೋಗ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ. ಲಕ್ಷ್ಮಣ ಭಂಡಾರಿ ಶುಭಾಶಯ ಕೋರಿದರು. ಗುರುಧ್ವಯರಿಗೆ ಗುರುವಂದನೆ ಸಲ್ಲಿಸಲಾಯಿತು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗ ಪ್ರಾತ್ಯಕ್ಷಿಕೆ ನಡೆಸಿದ ಸುಮಾರು 85 ಯೋಗ ಶಿಕ್ಷಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪತಂಜಲಿ ಸಮೂಹ ಪರಿವಾರದ ಪ್ರಭಾರಿಗಳವರಾದ ವೆಂಕಟೇಶ್ ಮೆಹಂದಲೇ,
ಕೆ.ರಾಘವೇಂದ್ರ ಭಟ್, ಅನಂತರಾಯ ಶೆಣೈ, ಜಗದೀಶ ಕುಮಾರ್, ಲೀಲಾ ಆರ್ ಅಮೀನ್, ಹರಿಪ್ರಸಾದ್ ಕೆ ಉಪಸ್ಥಿತರಿದ್ದರು. ರಂಜೀತ ಕೆ.ಎಸ್. ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಣ ಕಾಮತ್ ಧನ್ಯವಾದವಿತ್ತರು.
0 ಕಾಮೆಂಟ್‌ಗಳು