Header Ads Widget

ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ :

ನಮ್ಮ ಸಹೋದ್ಯೋಗಿಗಳು ನಮ್ಮ ಆಸ್ತಿ. ಅಂಚೆ ಇಲಾಖೆಯ ವಿವಿಧ ಯೋಜನೆ ಯೋಚನೆಗಳನ್ನು, ವಿನೂತನ ಪರಿಕಲ್ಪನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಂಚೆ ಇಲಾಖೆಯ ಸಿಬ್ಬಂದಿಗಳು ಹಾಗೂ ವಿವಿಧ ಸವಲತ್ತುಗಳ ಅಧಿಕೃತ ಏಜೆಂಟ್ ರವರ ಪಾತ್ರ ಮಹತ್ತರವಾದದ್ದು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಾದ ರಮೇಶ್ ಪ್ರಭು ಅಭಿಪ್ರಾಯ ಪಟ್ಟರು. 

ಉಡುಪಿ ಅಂಚೆ ವಿಭಾಗದ ವಿಭಾಗೀಯ ಮಟ್ಟದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತೀಯ ಅಂಚೆ ಇಲಾಖೆ ಹತ್ತು ಹಲವು ಹೊಸತನಗಳೊಂದಿಗೆ ಆಧುನಿಕ ತಂತ್ರಜ್ಞಾನಕ್ಕೆ  ಹೊಂದಿಕೊಳ್ಳುತ್ತಲಿದೆ ಎಂದು ಹೇಳಿದರು.  ದೀಪ ಬೆಳಗಿಸಿ ಉದ್ಘಾಟನೆ ನಡೆಸಿಕೊಟ್ಟ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರು ಉಡುಪಿ ಅಂಚೆ ವಿಭಾಗ ಗ್ರಾಹಕರ ಸೇವೆಗೆ ಸದಾ ಮುಂಚೂಣಿಯಲ್ಲಿ ಇರುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು.


ವಿಶ್ರಾಂತ ಹಿರಿಯ ಅಂಚೆ ಅಧೀಕ್ಷಕ ರಾದ ರಾಜಶೇಖರ ಭಟ್ ರವರು ಮಾತನಾಡುತ್ತ ರಾಷ್ಟ್ರ ಮಟ್ಟದಲ್ಲೂ ನಿರಂತರ ಪ್ರಶಸ್ತಿ ಗಳಿಸುತ್ತಿರುವ ಉಡುಪಿ ಅಂಚೆ ವಿಭಾಗವನ್ನು ಶ್ಲಾಘಿ ಸಿದರು. ನಿಕಟಪೂರ್ವ ಹಿರಿಯ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿ  ಪ್ರೇರಣಾ ಮಾತುಗಳನ್ನು ಆ ಡಿದರು.ಏಕೀಕೃತ ವಿತರಣಾ ಕೇಂದ್ರ ದ ಸಿಬ್ಬಂದಿ ಶರತ್ ಪ್ರಾರ್ಥಿಸಿದರು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ(ಆರ್) ದಯಾನಂದ ದೇವಾಡಿಗ ಸ್ವಾಗತಿಸಿ ದರು.  ಸಹಾಯಕ ಅಂಚೆ ಅಧೀಕ್ಷಕ(ಹೆಚ್ ಕ್ಯೂ) ವಸಂತ್ ಪ್ರಸ್ತಾವನೆ ನಡೆಸಿಕೊಟ್ಟರು. ವಿಭಾಗೀಯ ಅಂಚೆ ಕಚೇರಿಯ ಸಿಬ್ಬಂದಿಗಳಾದ ಶರ್ಮಿಳಾ,ಜ್ಯೋತಿ ಆಚಾರ್ಯ,ಪ್ರಜ್ವಲ್, ಆಶಾ ಲತಾ, ಉಡುಪಿ ಅಂಚೆ ವಿಭಾಗದ ಉತ್ತರ ಉಪ ಅಂಚೆ ನಿರೀಕ್ಷಕ ಶಂಕರ್ ಲಮಣಿ ಯವರು ಪ್ರಶಸ್ತಿ ವಿಜೇತರ ವಿವರ ನೀಡಿದರು. 


ಈ ಸಂಧರ್ಭದಲ್ಲಿ ತಾಂತ್ರಿಕ ನಿರ್ವಹಣಾ ವಿಭಾಗದಲ್ಲಿ ಸಹಕರಿಸಿದ  ಉಡುಪಿ ವಿಭಾಗಾ ತಂತ್ರಜ್ಞರನ್ನು ವರನ್ನು ಗುರುತಿಸಿ ಗೌರವಿಸಲಾಯಿತು.ಉಡುಪಿ ದಕ್ಷಿಣ ಸಹಾಯಕ ಅಂಚೆ ಅಧೀಕ್ಷಕ ಹರೀಶ್ ರವರು ಧನ್ಯವಾದವಿತ್ತರು.ವಿಭಾಗೀಯ ಕಚೇರಿಯ ಸಿಬ್ಬಂದಿ ವಿಗ್ನೇಶ್ ಸಹಕರಿಸಿದರು.    ಉಡುಪಿ ಅಂಚೆ ವಿಭಾಗದ ಏಕೀಕೃತ ವಿತರಣಾ ಕೇಂದ್ರದ ಮೇಲ್ವಿಚಾರಕಿ (ಪ್ರಭಾರ) ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು