ಉಡುಪಿ :-ಹೋಂ ಡಾಕ್ಟರ್ ಫೌಂಡೇಶನ್ ( ರಿ ),ಇದರ ವತಿಯಿಂದ ಆಥಿ೯ಕವಾಗಿ ಅಶಕ್ತರಾಗಿದ್ದು, ವ್ಯಾಸಂಗ ಮುಂದುವರೆಸಲು ಕಷ್ಟಪಡಬೇಕಾಗಿರುವ ವಿದ್ಯಾಥಿ೯ಗಳಿಗೆ ನೆರವಾಗುವ ದೃಷ್ಠಿಯಿಂದ ರೂಪುಗೊಂಡ ವಿದ್ಯಾಥಿ೯ ಜೋಳಿಗೆ ಕಾಯ೯ಕ್ರಮ ಜು, 27 ರಂದು ಕೊಳಲಗಿರಿ ಯಲ್ಲಿ ನಡೆಯಿತು.
ಈ ಕಾಯ೯ಕ್ರಮದಲ್ಲಿ 21 ವಿದ್ಯಾಥಿ೯ಗಳಿಗೆ 1.47 ಲಕ್ಷ ರೂ ವಿದ್ಯಾಥಿ೯ ವೇತನ ನೀಡಿ ವ್ಯಾಸಂಗ ಮುಂದುವರೆಸಲು ನೆರವು ನೀಡಲಾಯಿತು.
ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಮುಖರಾದ ಡಾ.ಶಶಿಕಿರಣ್ ಶೆಟ್ಟಿ, ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಅನೇಕ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಈ ವಿದ್ಯಾರ್ಥಿ ಜೋಳಿಗೆ ಕಾನ್ಸೆಪ್ಟ್ ನ ಮೂಲಕ ವಿದ್ಯಾರ್ಥಿಗಳಿಗೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಆರ್ಥಿಕವಾಗಿ ನೆರವು ನೀಡುವ ಯೋಜನೆ ಆಗಿದೆ. ಆರ್ಥಿಕವಾಗಿ ದುರ್ಬಲರಾಗಿದ್ದು ಮುಂದೆ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಈ ಯೋಜನೆ ರೂಪಿಸಲಾಗಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಡಾ. ಸುಮಾ ಶೆಟ್ಟಿ ,ಶಶಿಕಲಾ ಶೆಟ್ಟಿ, ಸುಂದರ ಶೆಟ್ಟಿ,ಬಂಗಾರಪ್ಪ, ವಾಣಿಶ್ರೀ ಗೋವಿಂದ ಭಂಡಾರಿ, ರಾಜೇಶ್ವರಿ ಲಕ್ಷ್ಮೀನಗರ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಉದಯ್ ನಾಯ್ಕ್ ನಿರೂಪಿಸಿದರು. ರಾಘವೇಂದ್ರ ಪ್ರಭು ಕವಾ೯ಲು ವಂದಿಸಿದರು.
ವಿದ್ಯಾಥಿ೯ಗಳು ಮತ್ತು ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು