ಈ ಬಗ್ಗೆ ದಿನಪತ್ರಿಕೆಯಲ್ಲಿ 25 ಜುಲೈ 2025 ರಂದು ವರದಿ ಪ್ರಕಟವಾಗಿದೆ. ಪತ್ರಿಕಾ ವರದಿಯನ್ನು ಗಮನಕ್ಕೆ ತೆಗೆದುಕೊಂಡ ಉಡುಪಿ-ಚಿಕ್ಕಮಗಳೂರು ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯೋಜನಾ ನಿರ್ದೇಶಕರು, ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಇವರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿ ದ್ದಾರೆ.
ಸಂಸದರ ಪತ್ರಕ್ಕೆ ದೂರಾವಾಣಿ ಮುಖಾಂತರ ಮಾತನಾಡಿದ ಯೋಜನಾ ನಿರ್ದೇಶಕರು, ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಚ್ಚಿಲ ಸರ್ವೀಸ್ ರಸ್ತೆಯ ಅಭಿವೃದ್ಧಿ ಕೆಲಸಗಳು ಸ್ವಲ್ಪ ದಿನದ ಮಟ್ಟಿಗೆ ಕುಂಠಿತಗೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಸರ್ವಿಸ್ ರಸ್ತೆಯ ೧ ಕಿ.ಮೀ ಹೊಂಡ ಬಿದ್ದ ಜಾಗವನ್ನು ದುರಸ್ಥಿ ಪಡಿಸುವುದಾಗಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು