Header Ads Widget

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಮಾಸಿಕ ಸಭೆ

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಮಾಸಿಕ ಸಭೆಯು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್ ನೇತ್ರತ್ವದಲ್ಲಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೊಟ್ಟ ಪಂಚ ಗ್ಯಾರಂಟಿಗಳಿಂದಾಗಿ ಮಹಿಳೆಯರು ಆರ್ಥಿಕವಾಗಿ ಶಕ್ತಿವಂತ ರಾಗಿದ್ದಾರೆ ಎಂದು ಹೇಳಿದರು. ಮಹಿಳಾ ಕಾಂಗ್ರೆಸ್ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯ 10 ಬ್ಲಾಕ್ ಗಳಲ್ಲಿ ಮಹಿಳೆಯರ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್ ಪದಗ್ರಹಣ ಸಮಾರಂಭದ ಯಶಸ್ಸಿಗೆ ಕಾರಣರಾದವರಿಗೆ ಕ್ರತಜ್ಙತೆ ಅರ್ಪಿಸಿದರು.

 ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾದ ರಮೇಶ್ ಕಾಂಚನ್, ಮರವಂತೆ ಕ್ರೃಷ್ಣ ಹೆಬ್ಬಾರ್,ಬ್ರಹ್ಮಾವರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾದ ಡಾ . ಸುನೀತಾ ಶೆಟ್ಟಿ, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ ,ಮಾಲಿನಿ ರೈ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾನು ಭಾಸ್ಕರ್ ಪೂಜಾರಿ,ಮಹಿಳಾ ಬ್ಲಾಕ್ ಅಧ್ಯಕ್ಷರು ಗಳಾದ ಶಾಂತಲತಾ ಶೆಟ್ಟಿ, ಮಮತಾ ಶೆಟ್ಟಿ , ರೇಖಾ ಸುವರ್ಣ, ಅನಿತಾ ಪೂಜಾರಿ,ಸೂರ್ಯಕಾಂತಿ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ನಾಯಕಿಯರಾದ ವಾಣಿ ಶೆಟ್ಟಿ,ಗೋಪಿ ನಾಯ್ಕ, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ,ಯಶೋದ, ಸುಮಿತ್ರಾ, ರಂಜಿನಿ ಹೆಬ್ಬಾರ್,ಫರೀದಾ, ಸರಸ್ವತಿ,ಅಮ್ರತಾ, ಜಯಶ್ರೀ,ಮಲ್ಲಿಕಾ ಪೂಜಾರಿ, ಶಾಂತಿ ಪಿರೇರಾ,ಸುಧಾ ಪೂಜಾರಿ,ಶೋಭಾ ಕಕ್ಕುಂಜೆ, ರಮಾದೇವಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ತಿಲಕ್ ರಾಜ್ ಸಭೆಗೆ ಸ್ವಾಗತ ಕೋರಿದರು ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪುಷ್ಪ ಅಂಚನ್ ಧನ್ಯವಾದ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು