Header Ads Widget

ಡಾ.ಗಣೇಶ್ ಗಂಗೊಳ್ಳಿ ಇವರ ಬಳಗದವರಿಂದ ಜಾನಪದ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಶ್ರೀ ಕೃಷ್ಣ ಅಷ್ಟಮಿಯ ವಿಶೇಷ 48 ದಿನದ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಆದಿತ್ಯವಾರ ಪ್ರಸಿದ್ಧ ಗಾಯಕ ಕರ್ನಾಟಕ ಸರಕಾರದ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಇವರ ಬಳಗದವರಿಂದ ಜಾನಪದ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ ಜರುಗಿತು.

ಪಕ್ಕ ವಾದ್ಯದಲ್ಲಿ ಚಂದನ ವಾಹಿನಿ ಬೆಂಗಳೂರು ಇದರ "ಗಾನ ಗರಡಿ" ಕಲಾವಿದರಾದ ಇವರ ಕೀಬೋರ್ಡ್ ,ಕಿರಣ್ ಬೆಂಗಳೂರು ಕೊಳಲು, ಗಣೇಶ್ ಕೆ. ಎಸ್ ಬೆಂಗಳೂರು ತಬಲ, ರಾಜೇಶ್ ಭಾಗವತ್ ಮುಲ್ಕಿ ಪ್ಯಾಡ್, ಸಕಾರಾಮ್ ಹಾವಂಜೆ ಭಾಗವಹಿಸಿದ್ದರು.

ಸಹಗಾಯಕರಾಗಿ ಶ್ರೀ ಮಧು ಸಾಗರ ಶಿಕ್ಷರು ವಸತಿ ಶಾಲೆ ಶ್ರೀ ಸಿದ್ಧಿವಿನಾಯಕ ಹಟ್ಟಿಯಂಗಡಿ ಶ್ರೀಮತಿ ವಿಜಯಲಕ್ಷ್ಮಿ ಹಾವಂಜೆ ಇವರು ಭಾಗವಹಿಸಿದ್ದರು.

ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಮಠದ ವತಿಯಿಂದ ಎಲ್ಲಾ ಕಲಾವಿದರನ್ನು ಪ್ರಸಾದ ನೀಡಿ ಆಶೀರ್ವದಿಸಿದರು.

ಶ್ರೀಮಠದ ರಮೇಶ್ ಭಟ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು