Header Ads Widget

ಉಡುಪಿ ಮಲಬಾರ್ ಗೋಲ್ಡ್ ಡೈಮಂಡ್ಸ್ ನಲ್ಲಿ ವ್ಯಾನಾ ಅನಾವರಣ

ಮಲಬಾರ್ ಗೋಲ್ಡ್ ಡೈಮಂಡ್ಸ್ ನಲ್ಲಿ ವ್ಯಾನಾ ಅನಾವರಣವನ್ನು ಗ್ರಾಹಕರಾದ ಹರ್ಷಲ್ ಹಾಗೂ ಶ್ರಾವ್ಯ ಅನಾವರಣಗೊಳಿಸಿದರು.

ವಿಶ್ವದ ಪ್ರಮುಖ ಆಭರಣ ರೀಟೇಲರ್ ಮಾರಾಟಗಾರರಲ್ಲಿ ಒಂದಾಗಿರುವ, ಹಾಗೂ ಜವಾಬ್ದಾರಿಯುತ ಆಭರಣ ವ್ಯಾಪಾರಿಯೆಂದು ಪ್ರಸಿದ್ದಿಯುಳ್ಳ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಮಹಿಳೆಯರ ವಿಶಿಷ್ಟ ತತ್ವವನ್ನು ಆಚರಿಸುವ ಉಜ್ವಲ ರತ್ನಾಭರಣ ಸಂಗ್ರಹ ವ್ಯಾನಾ ವನ್ನು ಹೆಮ್ಮೆಯಿಂದ ಅನಾವರಣಗೊಳಿಸಿದೆ. ಯಾವುದೇ ಎರಡು ರತ್ನಗಳು ಹಾಗೂ ಯಾವುದೇ ಇಬ್ಬರು ಮಹಿಳೆಯರು ಒಂದೇ ತರಹರಾಗಿರುವುದಿಲ್ಲ ನಂಬಿಕೆಯಿಂದ ಪ್ರೇರಿತವಾದ ವ್ಯಾನಾ, ವೈಯಕ್ತಿಕತೆ, ಅಂತರಂಗ ಶಕ್ತಿ ಹಾಗೂ ಸ್ವ-ಅಭಿವ್ಯಕ್ತಿಗೆ ಸಮರ್ಪಿತವಾದ ಒಂದು ಗೌರವ ಸಂಕೇತವಾಗಿದೆ ,18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದಲ್ಲಿ ನಿಖರವಾಗಿ ತಯಾರಿಸಲಾದ ವ್ಯಾನಾ, ವಜ್ರಗಳ ಕಿರಣೋತ್ಸರ್ಗವನ್ನು ಬಣ್ಣಗಳ ರತ್ನಪಟಲದೊಂದಿಗೆ ಮಿಶ್ರಣಗೊಳಿಸುತ್ತದೆ. ಈ ಸಂಗ್ರಹವು ಹಗುರವಾದ, ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದ್ದು, ಟ್ರೆಂಡಿ, ಧೈರ್ಯಶಾಲಿ ಮತ್ತು ಸುಲಭವಾಗಿ ಧರಿಸಬಹುದಾದಂತಿದೆ. ಆಂತರಿಕ ಶಕ್ತಿಗೆ ಅರ್ಪಿತವಾದ ವ್ಯಾನಾ, ಪರಂಪರೆಯನ್ನು ಗೌರವಿಸುವುದರ ಜೊತೆಗೆ ತನ್ನದೇ ವಿಶಿಷ್ಟ ಶೈಲಿಯಲ್ಲಿ ಹೊಳೆಯುವ ಮಹಿಳೆಯನ್ನು ಸಂಭ್ರಮಿಸುತ್ತದೆ ಎಂದು ಸಂಸ್ಥೆಯ ಸಿಬ್ಬಂದಿ ಸಮೀರ್ ವಿವರಿಸಿದರು.

ಇದರೊಂದಿಗೆ, ಮಲಬಾರ್ ಗೋಲ್ಡ್ ಡೈಮಂಡ್ಸ್ ಜೆಮ್‌ಸ್ಟೋನ್ ಜುವೆಲ್ಲರಿ ಫೆಸ್ಟಿವಲ್‌ನಲ್ಲಿ ವ್ಯಾನಾ ಸಂಗ್ರಹದೊಂದಿಗೆ ಅಮೂಲ್ಯ ರತ್ನಗಳು ಹಾಗೂ ಅನ್ ಕಟ್ ಡೈಮಂಡ್ಸ್ ಗಳನ್ನು ಒಳಗೊಂಡ ಸಾಂಪ್ರದಾಯಿಕ ಆಭರಣ ಸಂಗ್ರಹವನ್ನೂ ಪ್ರದರ್ಶಿಸುತ್ತಿದೆ. ಉತ್ಸವದ ಭಾಗವಾಗಿ, ಗ್ರಾಹಕರು ಎಲ್ಲಾ ರತ್ನಾಭರಣ ಮತ್ತು ಅನ್‌ಕಟ್ ಡೈಮಂಡ್ ಆಭರಣಗಳ ತಯಾರಿಕಾ ಶುಲ್ಕದಲ್ಲಿ ಗರಿಷ್ಠ 25% ರವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ವಿಶೇಷ ಆಫರ್ ಸೆಪ್ಟೆಂಬರ್ 7, 2025 ರವರೆಗೆ ಇದೆ ಎಂದು ಮಾರುಕಟ್ಟೆ ವ್ಯವಸ್ಥಾಪಕರಾದ ತಂಝೀಮ್ ಶಿರ್ವ ತಿಳಿಸಿದರು.

ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಮಾತನಾಡಿ, ವ್ಯಾನಾ ಕೇವಲ ಒಂದು ಆಭರಣ ಸಂಗ್ರಹವಲ್ಲ, ಅದು ಮಹಿಳೆಯ ಆತ್ಮದ ಅನೇಕ ಬಣಗಳಿಗೆ ಬಣ್ಣಗಳಿಗೆ ಸಮ ಸಮರ್ಪಿತವಾದ ಗೌರವ ಎಂದರು.

ಕಾರ್ಯಕ್ರಮದಲ್ಲಿ ಶಾಖಾ ಸೇಲ್ಸ್ ಮ್ಯಾನೇಜರ್ ಮುಸ್ತಫಾ ಏ.ಕೆ, ಗುರುರಾಜ್,ಹರೀಶ್,ದಿವ್ಯಾ ಉಪಸ್ಥಿತರಿದ್ದರು.

ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ನಿತ್ಯಾನಂದ ನಾಯಕ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು