ಶಿಕ್ಷಕರ ದಿನಾಚರಣೆಯನ್ನು ಉಡುಪಿಯ ಮುಕುಂದಕೃಪಾ ಶಾಲೆಯಲ್ಲಿ ಆಚರಿಸಲಾಯಿತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಶಾಲಾ ಬ್ಯಾಂಡ್ ನೊಂದಿಗೆ ಸಭೆಗೆ ತಂದು ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಮುಖ್ಯ ಅತಿಥಿಯಾಗಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸೆಲಿನ್ ಕರ್ಕಡ ರವರು ಆಗಮಿಸಿ ತಾವು ಶಾಲೆಯಲ್ಲಿ ಕಳೆದ ಗತದಿನಗಳನ್ನು ಮೆಲುಕು ಹಾಕಿದರು ಹಾಗೂ ಮಕ್ಕಳಿಗೆ ಸತ್ಪ್ರಜೆಗಳಾಗಿ ಬಾಳಿ ಬದುಕಿ ಎಂದು ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿನುತಾ ಎಸ್ ನಾಯಕ್ ಅಧ್ಯಕ್ಷತೆ ವಹಿಸಿ "ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯವು ಶಿಕ್ಷಕರಿಗೆ ಗೌರವವನ್ನು ತೋರಿಸುವುದರ ಮೂಲಕ ನಿತ್ಯವು ಶಿಕ್ಷಕ ದಿನವನ್ನಾಗಿಸಬೇಕು" ಎಂದು ತಿಳಿ ಹೇಳಿದರು.
ಶಾಲಾ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಸುರೇಂದ್ರ ಮೆಂಡನ್ ಶುಭ ಹಾರೈಸಿದರು.
ಶಾಲಾ ವತಿಯಿಂದ ಹಾಗೂ ಶಿಕ್ಷಕ - ರಕ್ಷಕ ಸಂಘದ ವತಿಯಿಂದ ಮುಖ್ಯ ಅತಿಥಿಗಳನ್ನು ಗೌರವಿಸಲಾಯಿತು.
ಶಿಕ್ಷಕರ ದಿನದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ವಿದ್ಯಾಲಕ್ಷ್ಮಿ ತಿಳಿಸಿದರು.
ಅತಿಥಿಗಳನ್ನು ಶ್ರೀಮತಿ ಗೀತಾ ಪರಿಚಯಿಸಿದರು. ವಿದ್ಯಾ ಹಾಗೂ ಶ್ರೀಮತಿ ರೇಷ್ಮಾಂಜಲಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನಂದಾ ಸ್ವಾಗತವನ್ನು ಕೋರಿ ವೀಣಾ ವಂದನಾರ್ಪಣೆಗೈದರು.
ವಿದ್ಯಾರ್ಥಿಗಳು ಸಾಮೂಹಿಕ ಗಾಯನ ಹಾಗೂ ನೃತ್ಯ ವೈವಿಧ್ಯಗಳ ಮೂಲಕ ಮನರಂಜಿಸಿದರು.
ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
0 ಕಾಮೆಂಟ್ಗಳು