ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ನೇತ್ರ ಜ್ಯೋತಿ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯ ಮಲ್ಟಿಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಮಾಯೆ ಮಣಿಪಾಲದ ಮುಖ್ಯ ಕಾರ್ಯನಿರ್ವಾಹನಾಧಿಕಾರಿಗಳಾದ ಡಾ| ಆನಂದ್ ವೇಣುಗೋಪಾಲ್ ರವರು ಮಾತನಾಡಿ ಹಿಂದಿನ ಗುರುಕುಲ ಮಾದರಿಯ ಶಿಕ್ಷಣದಿಂದ ಬದಲಾದ ಶಿಕ್ಷಣ ಕ್ರಮದ ಕುರಿತು ತಿಳಿಸಿದರು. ಸಾಂಪ್ರದಾಯಿಕ ಪಾಠದ ಗಡಿಯನ್ನು ದಾಟಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಯೊಂದಿಗೆ ಶಿಕ್ಷಕರರು ಒಗ್ಗಿಕೊಳ್ಳುವುದು ಅವಶ್ಯ ಎಂದರು. ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಡಾ| ಕೃಷ್ಣಪ್ರಸಾದ್ ಕೂಡ್ಲುರವರು ಮಾತನಾಡಿ ಹಿಂದಿನ ಶಿಕ್ಷಕರ ಮೇಲಿದ್ದ ಭಯ, ಭಕ್ತಿ, ಗೌರವ ಈಗ ಕಡಿಮೆಯಾಗುತ್ತೀರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಶಿಕ್ಷಕರು ಭವಿಷ್ಯ ನಿರ್ಮಾಣ ಮಾಡುವ ಶಿಲ್ಪಿಗಳು ಎಂದರು. ಕಾಲೇಜಿನ ಸಿ ಒ ಒ ಡಾ| ಗೌರಿ ಪ್ರಭುರವರು ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನಅಧ್ಯಕ್ಷೆ ಶ್ರೀಮತಿ ರಶ್ಮೀ ಕೃಷ್ಣಪ್ರಸಾದ್ ಭೋದನೆ ಒಂದು ತಪಸ್ಸಿದಂತೆ, ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆ ತರುವ ಶಕ್ತಿ ಶಿಕ್ಷಕರಲ್ಲಿ ಅಡಗಿದೆ ಎಂದರು. ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ಪ್ರಸಿದ್ದ ನೇತ್ರ ತಜ್ಞ ಡಾ|ಪರೇಶ್ ಪೂಜಾರಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕು. ಶ್ರಾವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಸಾದ್ ನೇತ್ರಾಲಯದ ಆಡಳಿತಧಿಕಾರಿ ಶ್ರೀ ಮದ್ವಾ ವಲ್ಲಭ ಆಚಾರ್ಯರವರು ಎಲ್ಲರನ್ನು ಸ್ವಾಗತಿಸಿದರು. ಕುಮಾರಿ ಐಶ್ವರ್ಯ ಶೆಟ್ಟಿ ವಂದಿಸಿದರು. ಶ್ರೀ ಮಾಧವ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಮತ್ತು ಮಂಗಳೂರಿನ ಸುಮಾರು 20 ಶಿಕ್ಷಕರರಿಗೆ ಕಾಲೇಜು ಹಾಗೂ ಪ್ರಸಾದ್ ನೇತ್ರಾಲಯದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು... ಪ್ರೊ. ರಾಜಮೋಹನ್. ಶ್ರೀ ಪರಮೇಶ್ವರ್ ಎನ್ ಮೊಗವೀರ, ಶ್ರೀ ವಿಶ್ವನಾಥ್ ಕರಬ,ಶ್ರೀಮತಿ ಪಾರ್ವತಿ ಕೊತ್ವಲ್,ಶ್ರೀಮತಿ ಶೋಭಾ ಪೈ, ಶ್ರೀಮತಿ ಭಾಗ್ಯಶ್ರೀ ಐತಾಳ್, ಶ್ರೀ ಲಕ್ಷೀ ನಾರಾಯಣ, ಶ್ರೀಮತಿ ಅಕ್ಷತಾ ಪೂಜಾರಿ, ಕು ಪೃಥ್ವಿಶ್ರೀ ರವೀಂದ್ರ, ಶ್ರೀಮತಿ ವಾಸಂತಿ ಅಂಬಾಲ್ಪಾಡಿ, ಶ್ರೀಮತಿ ಅಪರ್ಣ ಭಟ್, ಶ್ರೀ ಪ್ರಶಾಂತ್, ಡಾ|ನೇರಿ ಕಾರ್ನಲಿಯೊ, ಶ್ರೀ ದೇವಿದಾಸ್ ಡಿ ಪ್ರಭು, ಶ್ರೀ ಶೇಖರ್ ಭೋವಿ, ಶ್ರೀ ಗಿರೀಶ್ ನಾಯ್ಕ್, ಡಾ| ಸಹನಾ ಮಾಬೆನ್, ಶ್ರೀ ದೇವಿದಾಸ್ ಪಾಟ್ಕರ್ ಹಾಗೂ ಶ್ರೀಮತಿ ಶಭಾನ ಸ್ಯೆದ್.
0 ಕಾಮೆಂಟ್‌ಗಳು