ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಸದಸ್ಯರು ವಿವೇಕ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಬಾಲಕರ ಪ್ರೌಢಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಶಿಕ್ಷಕರ ದಿನದ ಮುನ್ನಾ ದಿನ ಶುಭಾಶಯ ಕೋರುವ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಎಸ್ ನಾಗೇಶ ಶಾನುಭೋಗ ವಹಿಸಿದ್ದರು.ಗೌರವಾಧ್ಯಕ್ಷರಾದ ಪ್ರಾಂಶುಪಾಲ ಕೆ. ಜಗದೀಶ ನಾವಡರು ಸ್ವಾಗತಿಸಿ,ಹಿರಿಯ ಸಹಶಿಕ್ಷಕರಾದ ಗೌರವ ಉಪಾಧ್ಯಕ್ಷ ಪ್ರೇಮಾನಂದ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀಎಚ್.ವಿ.ಸೋಮಯಾಜಿ ಹಾಗೂ ಕೆ.ತಾರಾನಾಥ ಹೊಳ್ಳ, ಜಿ.ಸುರೇಶ್,ಪಿ. ಶ್ರೀಪತಿ ಹೇರ್ಳೆ ಉಪಸ್ಥಿತರಿದ್ದರು.
ಬಾಲಕಿಯರ ಪ್ರೌಢಶಾಲೆ ಮತ್ತು ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಉಪಾಧ್ಯರು ವಹಿಸಿದ್ದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಗೌರವ ಉಪಾಧ್ಯಕ್ಷ ವೆಂಕಟೇಶ ಉಡುಪ ಸ್ವಾಗತಿಸಿ ಕಾರ್ಯದರ್ಶಿ ಪಿ. ಸುಧಾಕರ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಪ್ರೀತಿರೇಖಾ, ಜನಾರ್ದನ ಹಂದೆ ಮತ್ತು ಉಮೇಶ ಉಡುಪರು ಶ್ರೀ ವೆಂಕಟೇಶ ಭಟ್ಟ,ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು