Header Ads Widget

ಕೊಡವೂರು : ಮುದ್ದುಕೃಷ್ಣ ಸ್ಪರ್ಧೆ

ಆಧುನಿಕ ಸಂಸ್ಕೃತಿ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಈ ನೆಲದ ಮಣ್ಣಿನ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆಯ ಜಾಗೃತಿಯನ್ನು ಎಳವೆಯಲ್ಲಿಯೇ ಮೂಡಿಸಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಹಿರಿಯ ರಂಗಕರ್ಮಿ ಎಂ.ಎಸ್.ಭಟ್ ಹೇಳಿದರು.ಅವರು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂರು ವರ್ಷದ ಒಳಗಿನ ಹಾಗೂ ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 85 ಸ್ಪರ್ಧಿಗಳು ಭಾಗವಹಿಸಿದ್ದರು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ಖಜನಾಧಿಕಾರಿ ಟಿ.ಚಂದ್ರಶೇಖರ್, ಭಕ್ತವೃಂದದ ಅಧ್ಯಕ್ಷ ದಿವಾಕರ ಶೆಟ್ಟಿ ತೋಟದ ಮನೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಪಾಲನ್ ,ರಾಜ ಸೇರಿಗಾರ, ಯಶೋದರ ಸಾಲ್ಯಾನ್, ಕೆ.ಬಾಬ, ಉಷಾಶೀಲಾ ಕೆ.ದೇವಾಡಿಗ.ದೇವಳದ ಲೆಕ್ಕ ಪರಿಶೋಧಕ ಉಮೇಶ್ ರಾವ್, ವ್ಯವಸ್ಥಾಪಕ ವಾಸುದೇವ ಉಪಾಧ್ಯ, ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ, ಗೋವಿಂದ ಪಾಲನ್ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಎಂ.ಎಸ್.ಭಟ್, ಮಲ್ಲಿಕಾ ದೇವಿ, ಬಾಲಕೃಷ್ಣ ಕೊಡವೂರು ಇವರನ್ನು ಗೌರವಿಸಲಾಯಿತು.

ಸತೀಶ್ ಕೊಡವೂರು ಸ್ವಾಗತಿಸಿ, ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು