Header Ads Widget

ಮಲಬಾರ್ ಗೋಲ್ದ್ ಅಂಡ್ ಡೈಮಂಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆ

ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆಯನ್ನು ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಿದರು. 

ಮಣೂರು ಪಡುಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡೆನೀಸ್ ಬಾಂಜಿ,ಹೆಬ್ರಿ-ಕಚ್ಚೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜಯ ಶೆಟ್ಟಿ, ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಧ್ಯಾಪಕರಾದ ಮೋಹಿದ್ದಿನ್, ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ,ಹಾಗು ಕಟಪಾಡಿ ಎಸ್ ವಿ ಎಸ್ ಶಾಲಾ- ಕಾಲೇಜಿನ ಪ್ರಾಂಶುಪಾಲರಾದ ಡಾ .ದಯಾನಂದ ಪೈ , ಬೈಲೂರು ಸಮೀಪದ ನಚಿಕೇತ ವಿದ್ಯಾಲಯ ಅಮೃತ ಭಾರತಿ ಸಂಸ್ಥೆಯ ಅಧ್ಯಾಪಕಿ ಕೃಷ್ಟಿಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ ಸಾಧನೆ ಮಾಡಿರುವ ವಿದುಷಿ ದೀಕ್ಷಾ ಅವರನ್ನು ಸನ್ಮಾನಿಸಿ ಗೌರವಿಸಿದರು. 

ಸನ್ಮಾನ ಸ್ವಿಕರಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಪ್ರಾಂಶುಪಾಲರಾದ ಡೆನಿಸ್ ಬಾಂಚಿಯವರು ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸಿದ್ದು ಬಹಳ ಸಂತಸ.ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದದು ಸವಾಲುಗಳಿಂದ ಕೂಡಿರುವ ವೃತ್ತಿ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ಮೊಬೈಲ್ ಜಾಲದಿಂದ ಹೊರಬರಬೇಕು. ಶಿಕ್ಷಕ ವೃತ್ತಿಯಲ್ಲಿ ತಿದ್ದಿ ಬುದ್ಧಿ ಹೇಳಿದಲ್ಲಿ ಮಾತ್ರ ಸಮಾಜದಲ್ಲಿ ವಿದ್ಯಾರ್ಥಿಗೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಅಮೃತ ಭಾರತಿ ಸಂಸ್ಥೆಯ ಅಧ್ಯಾಪಕಿ ಕೃಷ್ಟಿಕ ಮಂಗಳಮುಖಿಯಾಗಿ ಅಧ್ಯಾಪಕಿಯಾಗಿ ಸಾಧನೆ ಮಾಡಿರುವುದು ನನಗೂ ಕೂಡ ಹೆಮ್ಮೆಯನ್ನಿಸುತ್ತಿದೆ. ನೀವೆಲ್ಲರು ಹೆಮ್ಮೆ ಪಡಬೇಕು ಮಂಗಳಮುಖಿಯವರು ಶಿಕ್ಷಣ ವೃತ್ತಿ ಯಲ್ಲಿ ಸಾಧನೆ ಮಾಡುತ್ತಾರೆ ಎಂಬುದು ಸಮಾಜಕ್ಕೆ ತಿಳಿದಿರಲಿ ಎಂದು ಅಭಿಪ್ರಾಯವನ್ನು ಹಂಚಿಕೊಂಡರು ಮತ್ತು ಶಿಕ್ಷಕರಾದ ಜಯ ಶೆಟ್ಟಿ ,ಪ್ರಕಾಶ್ ಶೆಟ್ಟಿ,ಮೋಹಿದ್ದಿನ್, ಡಾ .ದಯಾನಂದ ಪೈ ತಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಂಡರು,

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಶಿಕ್ಷಕರ ಪಾತ್ರ ಬಹಳ ಮಹತ್ತರವಾದದು.ಜಗತ್ತಿನಲ್ಲಿ ಬಹುತೇಕ ಕಡೆಗಳಲ್ಲಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಾಧನೆಯನ್ನು ಮಾಡಿದ್ದಾರೆ. ಶಿಕ್ಷಣವೂ ನಮಗೆ ಅಮೂಲ್ಯವಾದ ಸಾಧನೆಗೆ ದಾರಿ ಮಾಡಿಕೊಟ್ಟಿವೆ. ಶಿಕ್ಷಕರ ಶಿಕ್ಷಣದಿಂದ ಗುರಿ ತಲುಪಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಈ ಸಂದರ್ಭ ಮಾತನಾಡಿ ಒಂದು ಮಗು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ಶಿಕ್ಷಕರ ಶಿಕ್ಷಣದಿಂದ ಸಾಧ್ಯ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠಗಳು ವಿದ್ಯಾರ್ಥಿ ತಿಳಿದುಕೊಂಡಲ್ಲಿ ಆತ ತನ್ನ ಗುರಿ ತಲುಪಲು ಸಾಧ್ಯವಿದೆ ಎಂದು ಶುಭ ಹಾರೈಸಿದರು,

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ,ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಯೋಗಿಶ್ ಕೊಟ್ಯಾನ್, ಡಾ. ಚರಿಷ್ಮಾ ಶೆಟ್ಟಿ, ಮಲಬಾರ್ ಗೊಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯ ಮುಖ್ಯಸ್ಥರು ಹಫೀಜ್ ರೆಹಮಾನ್ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮಾರುಕಟ್ಟೆ ವ್ಯವಸ್ಥಾಪಕರಾದ ತಂಝಿಮ್ ಶಿರ್ವ,ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾ ಸರಸ್ವತಿ ಪ್ರಾಸ್ತಾವಿಕ ಮಾತನಾಡಿದರು,ಶಿಕ್ಷಕರನ್ನು ನಿತ್ಯಾನಂದ್,ಯಾಸೀರ್,ದಿವ್ಯ,ಫಾರೂಕ್,ನಿಕಿತಾ ಪರಿಚಯಿಸಿದರು,ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಸಿಬ್ಬಂದಿ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮಲಬಾರ್ ಗೊಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು