ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮೃತ ಯುವಕನನ್ನು ಹರಿಕೇಶ್ (20) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿ ಹರಿಕೇಶ್ ಸ್ನೇಹಿತರಾದ ರಮೊನ್ ಜಾರ್ಜ್, ಯು.ಕೆ. ಅಶ್ವಿನಿ ಮತ್ತು ನೋಯಲ್ ಜೆ. ವರ್ಗೀಸ್ ಅವರೊಂದಿಗೆ ಅಪಾಟ್‌ರ್ಮೆಂಟ್‌ನಲ್ಲಿ ವಾಸ ಮಾಡಿಕೊಂಡಿದ್ದರು.
ಸೆ. 6ರಂದು ರಾತ್ರಿ ಹರಿಕೇಶ್ ತನ್ನ ಕೊಠಡಿಯ ಬಾಗಿಲು ತೆಗೆಯದೆ ಬಗ್ಗೆ ಮಾಹಿತಿ ಬಂದ ಮೇರೆಗೆ ವಸತಿಗೃಹದ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರಂತೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಹರಿಕೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು