Header Ads Widget

ಇಂದ್ರಾಳಿ : ಸಂಸ್ಥಾಪಕರ ದಿನಾಚರಣೆ, ಶಾಲಾ ವಾರ್ಷಿಕೋತ್ಸವ

ಇಂದ್ರಾಳಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವವು ಅತ್ಯಂತ ಅದ್ಧೂರಿಯಾಗಿ ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ಎಸ್ ನಾಯ್ಕ ಇವರು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಬೇಕು, ಶಿಸ್ತು ಬದ್ಧ ಜೀವನವನ್ನು ಅಳವಡಿಸಿಕೊಂಡು, ಹಿರಿಯರನ್ನು ಗೌರವಿಸುತ್ತಾ ಉತ್ತಮ ಪ್ರಜೆಗಳಾಗಬೇಕು. 

ಪೋಷಕರು ಕೂಡ ತಮ್ಮ ಮಕ್ಕಳನ್ನು ತಾತ್ಸಾರ ಮಾಡದೇ, ಉತ್ತಮ ಚಿಂತನೆಗಳನ್ನು ಮಕ್ಕಳಲ್ಲಿ ತುಂಬಿ, ಮಾನಸಿಕ ಸ್ಥೆರ್ಯವನ್ನು ಕೊಡಬೇಕು. ಶಿಕ್ಷಕರು ಪಾಠದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿ, ಆದರ್ಶಪ್ರಾಯರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವಿನಾಯಕ ಕಿಣಿಯವರು ಶೈಕ್ಷಣಿಕ ವರ್ಷದ ವಾರ್ಷಿಕ ವರದಿ ವಾಚಿಸಿದರು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿದ ಕು। ರಜತ್ ಜಿ ರಾವ್ ಇವರು ವಿದ್ಯಾರ್ಥಿಗಳ ಹಸ್ತಪ್ರತಿ 'ಲಹರಿ'ಯನ್ನು ಬಿಡುಗಡೆಗೊಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ಮತ್ತು ಕ್ರೀಡೆ, ಕರಾಟೆ ಹಾಗೂ ಇನ್ನಿತರ ವಿಭಾಗಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈ, ಶ್ರೀ.ರತ್ನಾಕರ ಶೆಣೈ ತಮ್ಮ ವೈಯಕ್ತಿಕ ನಗದು ಬಹುಮಾನ ಮತ್ತು ರಕ್ಷಕ-ಶಿಕ್ಷಕ ಸಂಘದ ವತಿಯಿಂದ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾಡಳಿತ ಮಂಡಳಿಯ ಶ್ರೀ ಕೆ.ರತ್ನಾಕರ ಶೆಣೈ, ಶ್ರೀಮತಿ ವಿದ್ಯಾ ಅಮರ ಪೈ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಟರಾಜ್ ಪ್ರಭು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿ ನಾಯಕಿ ಕು। ಅಭಿನೇತ್ರ ಸತೀಶ ಆಚಾರ್ಯ ಸ್ವಾಗತಿಸಿ, ಕು। ವಂದಿತಾ ವಿ ಉಡುಪಿ ಹಾಗೂ ಕು। ಸೂರಜ್ ನಿರೂಪಿಸಿ, ಕು. ಅವನಿ ವಂದಿಸಿದರು. ಸಭಾ ಕಾಠ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಮನೋರಂಜನೆ, "ಎಂಡ್ ಇಲ್ಲದ ಬಂಡ್ ಅವತಾರ " ನಾಟಕ ಮತ್ತು "ಕಂಸ ದಿಗ್ವಿಜಯ – ಕಂಸ ವಧೆ ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು