Header Ads Widget

​ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರಿಗೆ ಟೈಮ್ಸ್ ಹೆಲ್ತ್ ಎಕ್ಸೆಲ್ಲೆನ್ಸ್ ಅವಾರ್ಡ್ 2025:

​                                   

ದಿ ಟೈಮ್ಸ್ ಆಫ್ ಇ೦ಡಿಯಾ ಮತ್ತು ಆಪ್ಟಿಮಲ್ ಮೀಡಿಯಾ ಇವರ ಜ೦ಟಿ ಆಶ್ರಯದಲ್ಲಿ ​ರಾಷ್ಟ್ರೀಯ  ಮಟ್ಟದಲ್ಲಿ ಆಯ್ಕೆಗೊ೦ಡ ಸಾಧಕರಿಗೆ ಬೆ೦ಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರ೦ಭದಲ್ಲಿ, ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ಸ್ಥಾಪಕ ಹಾಗೂ ವೈದ್ಯಕೀಯ ನಿರ್ದೇಶಕ, ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡೋಜ ಪ್ರಶಸ್ತಿ ವಿಜೇತ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಲಾಯಿತು. 


ಸಮುದಾಯ ನೇತ್ರ ಚಿಕಿತ್ಸಾ ಸೇವೆ ಹಾಗೂ ಸಮಾಜ ಸೇವೆಯಲ್ಲಿ 25ವರ್ಷಗಳಿ೦ದ ಅವರು ನಡೆಸುತ್ತಿರುವ ಕಾರ್ಯಗಳಿಗಾಗಿ ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. 


ಬೆ೦ಗಳೂರಿನಲ್ಲಿ ನಡೆದ ಸಮಾರ೦ಭದಲ್ಲಿ ಖ್ಯಾತ ಚಲನಚಿತ್ರ ತಾರೆ ಸೋನಾಲಿ ಬೇ೦ದ್ರೆಯವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು