ಪೂರ್ಣಪ್ರಜ್ಞ ಸಂಸ್ಥೆಯ ಇಡಿಪಿ (Entrepreneurship Development Program)ಸೆಲ್ ವತಿಯಿಂದ ಹಳೆಯ ವಿದ್ಯಾರ್ಥಿ ಶ್ರೀ ಪ್ರಥಮ್ ರಾವ್ ಅವರಿಗೆ ತಮ್ಮ ಹೊಸ ಸುಗಂಧ ದ್ರವ್ಯ ಬ್ರ‍್ಯಾಂಡ್ “ಲೆೋರೇನ್ ಮಿಲಿಯನೇರ್”(Leoren Millionaire) ಅನ್ನು ಅಧಿಕೃತವಾಗಿ ಪ್ರಾರಂಭಿಸಲು ಗೌರವಯುತ ವೇದಿಕೆ ಒದಗಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ಶ್ರೀ ಪ್ರಥಮ್ ರಾವ್ ಅವರು ತಮ್ಮ ಕನಸಿನ ಯೋಜನೆಯಾದ “ಲೆೋರೇನ್ ಮಿಲಿಯನೇರ್” ಪರ್ಫ್ಯೂಮ್ ಅನ್ನು ಪರಿಚಯಿಸಿದರು. ಆಕರ್ಷಕ ಪರಿಮಳ ಮತ್ತು ವಿಶಿಷ್ಟ ಗುಣಮಟ್ಟ ಹೊಂದಿರುವ ಈ ಬ್ರ‍್ಯಾಂಡ್ ಯುವಜನತೆ ಹಾಗೂ ಗ್ರಾಹಕರಲ್ಲಿ ವಿಶೇಷ ಮೆಚ್ಚುಗೆ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಇಡಿಪಿ ಸೆಲ್ ಸಂಯೋಜಕರಾದ ಶ್ರೀಮತಿ ಧನ್ಯಶ್ರೀ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ನಿಲ್ಲುತ್ತದೆ ಎಂದು ಹೇಳಿದರು. ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ಸದಾ ಬೆಂಬಲ ನೀಡುತ್ತದೆ ಎಂದು ಅವರು ಭರವಸೆ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಈ ಕಾರ್ಯಕ್ರಮದಲ್ಲಿ ಇಡಿಪಿ ಸೆಲ್ ನ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು