ಉಡುಪಿ: ನಿಟ್ಟೂರು ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನ ಅಭಿವೃದ್ಧಿಗೆ ಕೊಡುಗೆ ನೀಡಿದ ಆನುವಂಶಿಕ ಅರ್ಚಕರಾದ ಸುರೇಶ್ ಕಾರಂತ್, ಅರವಿಂದ್ ಕಾರಂತ್, ಹಲವು ವರ್ಷಗಳಿಂದ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ ಶ್ರೀಯುತ ಶ್ರೀವತ್ಸ, ಪಂಚವಾದ್ಯ ವಾದಕರಾದ ಶ್ರೀಯುತ ನಾರಾಯಣ ಲಕ್ಷ್ಮಿ ಶೋಭಾನೆ ಮಹಿಳಾ ಭಜನಾ ಮಂಡಳಿಯ ಸದಸ್ಯಯಾದ ಶ್ರೀವಿದ್ಯಾ, ಅವರನ್ನು ಸಮ್ಮಾನಿಸಲಾಯಿತು.
ವಿದುಷಿ ಶ್ರಾವ್ಯ ಹಿರಿಯಡ್ಕ ಹಾಗೂ ಅನನ್ಯ ಉಡುಪ ಇವರ ಭರತನಾಟ್ಯ ಪ್ರದರ್ಶನ, ಸುಂದರ್ ಪೂಜಾರಿ ಇವರ ವಿದ್ಯಾರ್ಥಿಗಳಿಂದ ಕೊಳಲು ವಾದನ, ಮಕ್ಕಳ ಹಾಗೂ ಮಹಿಳೆಯರ ವಿವಿಧ ನೃತ್ಯ ಪ್ರದರ್ಶನವು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟಿತು. ವೆಂಕಟರಾಜ್ ಕಾರಂತ ಹಾಗೂ ಮುರಳಿ ಭಟ್ ಕೊಡಂಕೂರು ಕಾರ್ಯಕ್ರಮ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕರಾದ ಶುಭಾ ಬಾಳ್ತಿಲ್ಲಾಯ, ಸುಂದರ ಪೂಜಾರಿ, ಲಕ್ಷ್ಮೀ ಶೋಭಾನೆ ತಂಡದ ಸದಸ್ಯರು, ಹಿರಿಯರು, ಭಕ್ತರು ಉಪಸ್ಥಿತರಿದ್ದರು.

0 ಕಾಮೆಂಟ್ಗಳು