ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ ಉಡುಪಿ ಇದರ ಮುಂದಿನ ೫ ಸಹಕಾರಿ ವರ್ಷಕ್ಕೆ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಶ್ರೀ ಅರುಣ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀ ಎಂ. ಗಣೇಶ್ ಕಿಣಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಶ್ರೀಮತಿ ಇಂದು ರಮಾನಂದ ಭಟ್, ಶ್ರೀ ನಾರಾಯಣ ಬಲ್ಲಾಳ್, ಶ್ರೀ ಎಲ್. ಉಮಾನಾಥ್, ಶ್ರೀ ದೇವದಾಸ್ ಶೆಟ್ಟಿಗಾರ್, ಶ್ರೀ ಯಶವಂತ ನಾಯಕ್, ಶ್ರೀ ರಾಧಾಕೃಷ್ಣ ಶೆಣೈ, ಶ್ರೀಮತಿ ಮೀನಾ ಕುಮಾರಿ ಯು, ಶ್ರೀಮತಿ ಶ್ವೇತಾ ಜೆ ಶೆಟ್ಟಿ, ಶ್ರೀ ಅಬ್ದುಲ್ಲಾ ಎಚ್. ಸಾಹೇಬ್, ಶ್ರೀ ಅರುಣ್ ಟಿ ಶೆಟ್ಟಿ, ಶ್ರೀ ಸುರೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ಚುನಾವಣಾ ಪ್ರಕ್ರಿಯೆಯನ್ನು ಶ್ರೀ ಕೆ. ಆರ್. ರೋಹಿತ್ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿ, ಉಡುಪಿ ನೆರವೇರಿಸಿಕೊಟ್ಟರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಹೆಗ್ಡೆ ಸಹಕರಿಸಿದರು.

0 ಕಾಮೆಂಟ್ಗಳು