ಟಿ.ಎ.ಪೈ ಪ್ರೌಢಶಾಲೆ: ಪೋಕ್ಸೋ ಕಾಯಿದೆ, ಮಾದಕ ದ್ರವ್ಯ ವ್ಯಸನ ಮಾಹಿತಿ ಕಾರ್ಯಕ್ರಮ

  

ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲಿನಲ್ಲಿ, ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ಪೋಕ್ಸೋ ಕಾಯಿದೆ, ಮಾದಕ ದ್ರವ್ಯ ವ್ಯಸನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಜರಗಿತು.

ಉಡುಪಿ ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಯ ಪೋಲಿಸ್‌ ಕಾನ್‌ ಸ್ಟೇಬಲ್‌ ನವ್ಯಶ್ರೀ ಅವರು ಮಕ್ಕಳ ಹಕ್ಕುಗಳು, ಪೋಕ್ಸೊ ಕಾಯಿದೆ, ಸೈಬರ್‌ ಕ್ರೈಮ್‌, ಮೊಬೈಲ್‌ ದುರ್ಬಳಕೆ, ಮಾದಕ ದ್ರವ್ಯ ವ್ಯಸನಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. ಅವರು ಮಾತನಾಡುತ್ತಾ ವಿದ್ಯಾಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ ಪ್ರೇಮ, ಮೊಬೈಲ್‌, ತಂಬಾಕು, ಮಾದಕ ದ್ರವ್ಯ, ವ್ಯಸನಗಳಿಗೆ ದಾಸರಾಗದೆ ಓದಿನ ಕಡೆ ಹೆಚ್ಚಿನ ಗಮನ ಹರಿಸಿ ಜೀವನವನ್ನು ಹಸನುಗೊಳಿಸಬೇಕು ಎಂದು ಕರೆಯಿತ್ತರು.

ಇನ್ನೋರ್ವ ಪೊಲೀಸ್‌ ಕಾನ್‌ಸ್ಟೇಬಲ್‌ ಮಹಾಲಕ್ಷ್ಮೀ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿನೋದಾ ಶೆಟ್ಟಿಯವರು ಪ್ರಾಸ್ತಾವನೆಗೈದರು. ಕುಮಾರಿ ವಿದ್ಯಾಶ್ರೀ ಸ್ವಾಗತಿಸಿದರು. ಕುಮಾರಿ ಪಂಚಮಿ ಎನ್‌ ವಂದನಾರ್ಪಣೆಗೈದರು. ಕುಮಾರಿ ಸಂಬ್ರಾಬಾನು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಸವಿತಾ, ಶ್ರೀಮತಿ ಜಯಶ್ರೀ ಕಾಯðಕ್ರಮವನ್ನು ಸಂಯೋಜಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು