ಪೂರ್ಣಪ್ರಜ್ಞಾ ಕಾಲೇಜು ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ತಾರಾವಲೋಕನ-- ವ್ಯೋಮ-ದೃಶ್ಯ-ಯಾನಎಂಬ ಎರಡು ದಿನಗಳ ಸಂಚಾರಿ ತಾರಾಲಯ ಪ್ರದರ್ಶನವನ್ನು ಇದೇ ದಿನಾಂಕ 21 ಮತ್ತು 22ನೇ ಏಪ್ರಿಲ್ ತಿಂಗಳಿನ ಬೆಳಿಗ್ಗೆ 10ಗಂಟೆಯಿಂದ ಪೂರ್ಣಪ್ರಜ್ಞಾ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಲಾಗಿದೆ.
ವಿಜ್ಞಾನ ಜಗತ್ತಿನ ವಿಸ್ಮಯಗಳನ್ನು ಅನುಭವಿಸಿ, ವೈಜ್ಞಾನಿಕ ಆಲೋಚನೆಯನ್ನು ಉತ್ತೇಜಿಸಿ, ಪ್ರೋತ್ಸಾಹಹಿಸುವ ಗುರಿಯನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಸಂಪೂರ್ಣ ಉಚಿತವಾಗಿದೆ. ಪ್ರಕಟಣೆಯಲ್ಲಿ ಕೊಟ್ಟಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.