Header Ads Widget

ಸಂಸ್ಮರಣೆ - ಪ್ರಶಸ್ತಿ ಪ್ರದಾನ

ಲಕ್ಷ್ಮೀ ಗುರುರಾಜ್ಸ್ ಎನ್. ಎನ್. ಯು.(ರಿ) ಸಂಸ್ಥೆಯ ಪಂಚತ್ರಿಂ ಶತ್ ಉತ್ಸವದ ನಾಲ್ಕನೇ ತಿಂಗಳ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸ್ಥಾಪಕರಾದ ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಮತ್ತು ಪೋಷಕರಾದ ದಿ. ಗುರುರಾಜ್ ಐತಾಳ್ ಕೊಡವೂರು ಇವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನೆಯು ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಇವರಿಂದ 25-04-2025 ಶುಕ್ರವಾರ ಸಂಜೆ 5.30 ಘಂಟೆಗೆ ಯಕ್ಷಗಾನ ಕಲಾರಂಗದ ಐ.ವೈ. ಸಿ. ವೇದಿಕೆಯಲ್ಲಿ ನೆರವೇರಿತು. ಉಡುಪಿಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ದಿ. ಕೃಷ್ಣಮೂರ್ತಿ ರಾವ್ ಸಂಸ್ಮರಣಾ ಭಾಷಣವನ್ನು ಶ್ರೀಯುತ ಗೋವಿಂದ ಐತಾಳ್ ಕೊಡವೂರು ಹಾಗೂ ದಿ. ಗುರುರಾಜ್ ಐತಾಳ್ ಸಂಸ್ಮರಣಾ ಭಾಷಣವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿಗಳಾದ ಶ್ರೀಯುತ ಸೇತುಮಾಧವ್ ಹಾಗು ಶ್ರೀಯುತ ನಾಗರಾಜ್ ತಂತ್ರಿಯವರು ನೆರವೇರಿಸಿದರು. ಶ್ರೀಯುತ ಮೋಹನ್ ಉಪಾಧ್ಯರು ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಯುತ ಚಂದ್ರಶೇಖರ್ ಕೊಡವೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಮಯೂರಿ ಗುರುರಾಜ್ ಐತಾಳ್ ಇವರು ತನ್ನ ಭರತನಾಟ್ಯ ಕಾರ್ಯಕ್ರಮವನ್ನು ತನ್ನ ತಂದೆ ಹಾಗು ತಾತನಿಗಾಗಿ ಸಮರ್ಪಿಸಿದರು.