ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಜ್ಪೆ ಸಮೀಪದ ಕಿನ್ನಿಕಂಬಳ ಬಳಿ ಅಪರಿಚಿತ ವ್ಯಕ್ತಿಗಳಿಂದ ಸುರತ್ಕಲ್ ನ ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆ ಎಂಬಾತನಿಗೆ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಯ ರಭಸಕ್ಕೆ ತಲೆಗೆ, ಕೈ, ಕಾಲಿಗೆ ಪೆಟ್ಟಾಗಿ ರಕ್ತದ ಮಡುವಿನಲ್ಲಿದ್ದ ಸುಹಾಸ್ ಎಂಬಾತನನ್ನು ಬಜ್ಪೆ ಪೊಲೀಸರು ಎಜೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯದಲ್ಲಿ ಕೊನೆ ಯುಸಿರು ಎಳೆದಿದ್ದಾನೆ ಎಂದು ಮಾಹಿತಿ ತಿಳಿಯ ಲಾಗಿದೆ.
ಸುಹಾಸ್ ಶೆಟ್ಟಿ ಇನ್ನೋವಾ ಕಾರ್ ನಲ್ಲಿ ಬಜ್ಪೆಯ ಕಿನ್ನಿಕಂಬಳ ಬಳಿ ಹೋಗುತ್ತಿರುವ ಸಂಧರ್ಭ, ಅದನ್ನೇ ಬೆನ್ನಟ್ಟಿದ ದುಷ್ಕರ್ಮಿಗಳು ಮೀನಿನ ಪಿಕ್ ಅಪ್ ವಾಹನದಲ್ಲಿ, ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಅಡ್ಡಕಟ್ಟಿದ್ದಾರೆ.
ಆ ಸಂಧರ್ಭ ಸುಹಾಸ್ ಶೆಟ್ಟಿ ಚಲಾಯಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಹೇರ್ ಕಟ್ಟಿಂಗ್ ಸಲೂನ್ ಗೆ ನುಗ್ಗಿದೆ. ಈ ವೇಳೆ ಗಾಡಿಯಲ್ಲಿ ಸುಹಾಸ್ ಶೆಟ್ಟಿ ಇಳಿಯುವಾಗ 4 ರಿಂದ 5 ಜನರ ಯುವಕರ ತಂಡ ಆತನನ್ನು ಬೆನ್ನತ್ತಿ ಕೊಂಡು ಹೋಗಿ ತಲವಾರಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.