Header Ads Widget

ಎಸ್ ಡಿ ಎಂ ಉದ್ಯಾವರ -ನೂತನ ಕ್ಷ-ಕಿರಣ ಹಾಗೂ ಪ್ರಯೋಗಾಲಯ ವಿಭಾಗಗಳ ಉದ್ಘಾಟನೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಉದ್ಯಾವರ ಇದರ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ನೂತನ ಕ್ಷ-ಕಿರಣ ಹಾಗೂ ಪ್ರಯೋಗಾಲಯ ವಿಭಾಗಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ ೧೦-೦೫-೨೦೨೫ ರಂದು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಗೌರವಾನ್ವಿತ ಮಹಿಳಾ ಮತ್ತು ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು, ಕರ್ನಾಟಕ ಸರಕಾರ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದರು. 

ಆಸ್ಪತ್ರೆಯ ಮಂಜುಶ್ರೀ ಹಾಗೂ ರತ್ನಶ್ರೀ ಆರೋಗ್ಯಾಲಯಗಳ ಸೌಲಭ್ಯಗಳನ್ನು, ಪ್ರಯೋಗಾಲಯ ಹಾಗೂ ಔಷಧಾಲಯಗಳನ್ನು ಅವಲೋಕಿಸಿದ ಅವರು ಸಂಸ್ಥೆಯು ಜನಸಾಮಾನ್ಯರಿಗೆ ಸಲ್ಲಿಸುತ್ತಿರುವ ಅವಿರತ ವೈದ್ಯಕೀಯ ಸೇವೆಯನ್ನು ಶ್ಲಾಘಿಸಿದರು. ಜನವರಿ ೩೧, ೨೦೨೫ ರಂದು ಲೋಕಾರ್ಪಣೆಗೊಂಡ ಕಾಲೇಜಿನ ನೂತನ ಕಟ್ಟಡಕ್ಕೆ ಆಗಮಿಸಿದ ಅವರು, ವಿದ್ಯಾರ್ಜನೆಗಿರುವ ಅತ್ಯಪೂರ್ವ ಸೌಲಭ್ಯಗಳನ್ನು ವಿಶೇಷವಾಗಿ ಅಭಿನಂದಿಸಿದರು.

ಎಸ್.ಡಿ.ಎಮ್. ಆಯುರ್ವೇದ ಸಂಸ್ಥೆಗಳ ನಿರ್ದೇಶಕರಾದ ಡಾ. ಪ್ರಸನ್ನ ಎನ್. ರಾವ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ಹಾಗೂ ಎಸ್.ಡಿ.ಎಮ್. ಆಯುರ್ವೇದ ಫಾರ್ಮಸಿಯ ಮುಖ್ಯಸ್ಥರಾದ ಡಾ. ಮುರಳೀಧರ ಆರ್. ಬಲ್ಲಾಳ್ ಇವರ ವಿಶೇಷ ಉಪಸ್ಥಿತಿಯಲ್ಲಿ ಸಂಸ್ಥೆಯ ಬೋಧಕ ಸಿಬ್ಬಂದಿಗಳನ್ನು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಆಸುಪಾಸಿನಲ್ಲಿದ್ದು, ನಿರಂತರ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ನೀವೆಲ್ಲರೂ ಧನ್ಯರು. ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಗೊಳ್ಳಲಿ, ದೇಶದಲ್ಲೇ ಮಾದರಿಯಾಗಿ ಹೆಸರುವಾಸಿಯಾಗಲಿ ಸರ್ವರಿಗೂ ಒಳಿತಾಗಲಿ ಎಂದು ನುಡಿದರು.

ಸ್ಥಳೀಯ ರಾಜಕೀಯ ಧುರೀಣರಾದ ಮುನಿಯಾಲು ಶ್ರೀ ಉದಯಕುಮಾರ್ ಶೆಟ್ಟಿ, ಮೊಳಹಳ್ಳಿ ಶ್ರೀ ದಿನೇಶ್ ಹೆಗ್ಡೆ, ಶ್ರೀ ಪ್ರಸಾದ್‌ರಾಜ್ ಕಾಂಚನ್‌ರವರು ಉಪಸ್ಥಿತರಿದ್ದರು. 

ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ಸ್ವಾಗತಿಸಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ರವರು ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಡಾ. ಪೂಜಾ ಪ್ರಾರ್ಥಿಸಿದರು. ರೋಗನಿದಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.