Header Ads Widget

ಮಲ್ಪೆ-ಕರಾವಳಿ ಜಂಕ್ಷನ್ ರಸ್ತೆ ಅಗಲೀಕರಣ : ಎರಡು ದಿನಗಳ ಕಾಲ ಏಕಮುಖ ಸಂಚಾರದ ವ್ಯವಸ್ಥೆ

ದಿನಾಂಕ 10.05.2025 ಮತ್ತು 11.05.2025ರಂದು ಎರಡು ದಿನಗಳ ಕಾಲ ಕರಾವಳಿ ಜಂಕ್ಷನ್ ನಿಂದ ಮಲ್ಪೆವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆ ಅಗಲೀಕರಣ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಕರಾವಳಿ ಜಂಕ್ಷನ್ ನಿಂದ ಮಲ್ಪೆ ವರೆಗೆ ರಸ್ತೆ ಬದಿ ತೆರವು ಕಾರ್ಯಾಚರಣೆ ನಡೆಯುವುದರಿಂದ ಕರಾವಳಿ ಜಂಕ್ಷನ್ ನಿಂದ ಮಲ್ಪೆ ವರೆಗೆ ಬೆಳಿಗ್ಗೆ 8 ರಿಂದ ಸಂಜೆ 8 ಗಂಟೆವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು (One Way) ಮಾಡಲಾಗಿರುತ್ತದೆ. ಆದ್ದರಿಂದ ಮಲ್ಪೆ, ಮಲ್ಪೆ ಬಂದರು, ಮಲ್ಪೆ ಬೀಚ್ ನಿಂದ ಉಡುಪಿ ಕಡೆಗೆ ಹೋಗುವ ಮೀನು ತುಂಬಿರುವ ವಾಹನ, ಭಾರಿ ಗಾತ್ರದ ವಾಣಿ, ಲಘು ವಾಹನ ಹಾಗೂ ಪ್ರವಾಸಿಗರು ಮಲ್ಪೆ ಜಂಕ್ಷನ್ ನಿಂದ ಸಿಟಿಜನ್ ಸರ್ಕಲ್ ಮಾರ್ಗವಾಗಿ ಕೊಡವೂರು -ಲಕ್ಷ್ಮಿನಗರ ಕ್ರಾಸ್-ಲಕ್ಷ್ಮಿ ನಗರ ಜಂಕ್ಷನ್-ಆಶೀರ್ವಾದ ನಗರ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸುವುದು. ಹಾಗೂ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳು ಮಲ್ಪೆ ಜಂಕ್ಷನ್ ನಿಂದ ಕಲ್ಮಾಡಿ ಜಂಕ್ಷನ್, ಕಿದಿಯೂರು, ಕಡೆಕಾರ್ ನಿಂದ ಕನ್ನರ್ ಪಾಡಿ ದೇವಸ್ಥಾನ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸುವುದು. 


ಮಾರ್ಗ 1 : ಮಲ್ಪೆ ಜಂಕ್ಷನ್ -> ಸಿಟಿಜನ್ ಸರ್ಕಲ್ -> ಕೊಡವೂರು -> ಲಕ್ಷ್ಮಿನಗರ ಕ್ರಾಸ್ -> ಲಕ್ಷ್ಮಿ ನಗರ ಜಂಕ್ಷನ್ -> ಆಶೀರ್ವಾದ ನಗರ -> ಉಡುಪಿ ರಾಷ್ಟ್ರೀಯ ಹೆದ್ದಾರಿ.


ಮಾರ್ಗ 2: ಮಲ್ಪೆ ಜಂಕ್ಷನ್ -> ಕಲ್ಮಾಡಿ ಜಂಕ್ಷನ್ -> ಕಿದಿಯೂರು -> ಕಡೆಕಾರ್ -> ಕನ್ನರ್ಪಾಡಿ ದೇವಸ್ಥಾನ -> ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ.