ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಸೇನಾನಿ ಸುರೇಶ್ ಚಂದ್ರಶೇಖರ ರಾವ್ ಇವರನ್ನು ಗೌರವಿಸ ಲಾಯಿತು. ಅವರು ಮಾತನಾಡಿ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಅನೇಕ ಯೋಧರನ್ನು ಸ್ಮರಿಸುತ್ತಾ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಟ್ಟ ಕಷ್ಟ, ಅಡೆತಡೆಗಳನ್ನು ಮೆಟ್ಟಿ ನಿಂತು ಭಾರತಮಾತೆಯ ರಕ್ಷಣೆಗಾಗಿ ಹೋರಾಟ ಮಾಡಿ ಹುತಾತ್ಮರಾದವರು ಮಾದರಿ ವ್ಯಕ್ತಿಯಾಗಿದ್ದು, ಇಂದಿನ ಪೀಳಿಗೆಯ ಯುವಜನರು ತಮ್ಮ ದೇಶ ಮತ್ತು ದೇಶವಾಸಿಗಳ ರಕ್ಷಣೆ ಮಾಡುವುದು ತಮ್ಮ ಕರ್ತವ್ಯ ಎಂದು ಸ್ಪೂರ್ತಿದಾಯಕ ಮಾತಗಳ ನ್ನಾಡಿದರು.
ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರುವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಧನ್ಯಾ ನಿರೂಪಿಸಿ, ಮನಸ್ವಿ ಸ್ವಾಗತಿಸಿ, ಸೃಜನ್ ಪೈ ಅತಿಥಿಗಳನ್ನು ಪರಿಚಯಿಸಿ, ಸೌಂದರ್ಯ ವಂದಿಸಿದರು.
0 ಕಾಮೆಂಟ್‌ಗಳು