Header Ads Widget

​ಮುಕುಂದಕ್ರಪಾ ಶಾಲೆ : ಸಂಸ್ಥಾಪಕರ ದಿನಾಚರಣೆ

 

ಶಾಲಾ ಸಂಸ್ಥಾಪಕರ ದಿನಾಚರಣೆ ಮುಕುಂದಕ್ರಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಯವರಾದ ಡಾ|| ಶ್ರೀಧರ್ ರಂಗನಾಥ ಪೈ ಇವರು ಶಾಲಾ ಸಂಸ್ಥಾಪಕರಾದ ಡಾ.ಟಿ.ಎಂ.ಎ. ಪೈ ಯವರ ಸಾಧನೆಗಳನ್ನು ಹಾಗೂ ನಮಸ್ತೆ' ಎನ್ನುವ ಪದದ ಪ್ರಾಮುಖ್ಯತೆಯನ್ನು ಕಥೆಯ ಮೂಲಕ ವಿವರಿಸಿದರು. ಡಾ. ಟಿ.ಎಂ.ಎ. ಪೈ ಯವರ ಭಾವಚಿತ್ರಕ್ಕೆ ಹೂಹಾರ ಹಾಕಿ, ದೀಪ ಬೆಳಗಿಸಿ ಸ್ಮರಿಸಲಾಯಿತು.


ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ ಕಾಲೇಜಿನ ನಿವತ್ತ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀ ನಾರಾಯಣ ಕಾರಂತರು ​ಮಾತನಾಡುತ್ತ  ಡಾ. ಟಿ.ಎಂ.ಎ. ಪೈ ಯವರು ಪಿಗ್ನಿ ಬ್ಯಾಂಕಿಂಗ್, ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಬದುಕಿಗೆ ಮಾದರಿಯಾಗಿದ್ದಾರೆ ಎಂದರು.


ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಂಗ ಪೈ ಅವರು ತನ್ನ ಚಿಕ್ಕಪ್ಪ ಡಾ. ಟಿ.ಎಂ.ಎ ಪೈ ಯವರ ಗತಜೀವನದ ಬಗ್ಗೆ ನೆನಪಿಸಿದರು. ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಸುರೇಂದ್ರ ಮೆ0ಡನ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸರ್ವರೂ ಸಂಸ್ಥಾಪಕರ ಭಾವಚಿತ್ರಕ್ಕೆ ಹೂದಳಗಳನ್ನು ಅರ್ಪಿಸಿದರು. 


ಶಾಲಾ ಮುಖ್ಯೋಪಾಧ್ಯಾಯಿನಿ  ವಿನುತಾ ಎಸ್ ನಾಯಕ್ ರವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿ ದರು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ನಂದಾ ಹಾಗೂ ದಿಶಾ ಕಾರ್ಯಕ್ರಮ ನಿರ್ವಹಿಸಿದರು.ಜಯಲಕ್ಷ್ಮೀ ಶಾಲಾ ಸಂಸ್ಥಾಪಕರ ಸಾಧನೆಯ ಬಗ್ಗೆ ಮಾತಾನಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನೆರವೇರಿತು. ವೀಣಾ ಕಾಮತ್ ವಂದನಾರ್ಪಣೆಗೈದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು