ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ವತಿಯಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಸಭಾಂಗಣದಲ್ಲಿ ಮೇ 17 ರಂದು ನಡೆಯಲಿರುವ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಯಕ್ಷಗಾನ ವಿದ್ವಾಂಸರಾದ ಪ್ರೊ. ಎಂ.ಎಲ್ ಸಾಮಗ ರವರ ಮನೆಗೆ ತೆರಳಿ ವೀಳ್ಯದೊಂದಿಗೆ ಆಮಂತ್ರಣ ಪತ್ರ ನೀಡುವ ಸಂಪ್ರದಾಯದ ಕಾಯ೯ಕ್ರಮ ಮೇ.12 ರಂದು ನಡೆಯಿತು.
ಈ ಸಂದಭ೯ ಮಾತನಾಡಿದ ಪ್ರೊ.ಎಂ.ಎಲ್ ಸಾಮಗ , ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆ ಮಾತ್ರವಲ್ಲದೆ , ಎಲ್ಲಾ ಸಾಹಿತಿಗಳ, ಕಲಾಸಕ್ತರ ಒಟ್ಟುಗೂಡುವಿಕೆಯಾಗಿದೆ. ಈ ಮೂಲಕ ಸಾಹಿತ್ಯ ಬೆಳವಣಿಗೆಗೆ ಪರೋಕ್ಷ ಕಾರಣವಾಗುತ್ತದೆ ಎಂದರು.
ಈ ಸಂದಭ೯ದಲ್ಲಿ ಪತ್ನಿ, ಕಲಾವಿದೆ ಪ್ರತಿಭಾ ಸಾಮಗ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್, ಹಿರಿಯರಾದ ಭುವನ ಪ್ರಸಾದ್ ಹೆಗ್ಡೆ, ಕೊಡವೂರು ದೇವಳದ ಆಡಳಿತ ಮಂಡಳಿ ಸದಸ್ಯ ವಾದಿರಾಜ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಶೆಣೈ, ವಿದ್ಯಾಶಾಮಸುಂದರ್, ಕಸಾಪ ಪದಾಧಿಕಾರಿಗಳಾದ ಪೂಣಿ೯ಮಾ ಜನಾದ೯ನ್, ರಂಜನಿ ವಸಂತ್, ಅನಿತಾ ಸಿಕ್ವೇರಾ, ವಸಂತ್, ರಾಜೇಶ್ ಭಟ್ ಪಣಿಯಾಡಿ, ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ, ಸಾಹಿತಿ ಡಾ.ಕಾತ್ಯಾಯನಿ ಕುಂಜಿಬೆಟ್ಟು, ಲಕ್ಮೀ ನಾರಾಯಣ ಉಪಾಧ್ಯ, ಸುಶಾಂತ್ ಕೆರೆಮಠ ಉಪಸ್ಥಿತರಿದ್ದರು.
ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಪ್ರಸ್ತಾವನೆಗೈದರು. ಕಾಯ೯ದಶಿ೯ ಜನಾದ೯ನ್ ಕೊಡವೂರು ನಿರೂಪಿಸಿದರು. ಸಂಘಟನಾ ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ವಂದಿಸಿದರು.