Header Ads Widget

ಮಾಹೆ ಮಣಿಪಾಲ್: ʼಕ್ಲಿನಿಕಲ್ ಲ್ಯಾಬೋರೇಟರಿ ಶಿಕ್ಷಣ ಮತ್ತು ಸಂಶೋಧನೆʼ ಕುರಿತು 4ನೇ ರಾಷ್ಟ್ರೀಯ ಸಮ್ಮೇಳನ

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಜಂಟಿಯಾಗಿ ಆಯೋಜಿಸಿದ್ದ ‘ಉದ್ಯಮ - ಶೈಕ್ಷಣಿಕ - ಸಂಶೋಧನಾ ಸಮನ್ವಯತೆ ಮೂಲಕ ಹೊಸತನಕ್ಕೆ ಮುನ್ನುಡಿʼ ಎಂಬ ವಿಷಯ ಕುರಿತು ಕೇಂದ್ರೀಕೃತವಾದ ‘ಕ್ಲಿನಿಕಲ್ ಲ್ಯಾಬೋರೇಟರಿ ಶಿಕ್ಷಣ ಮತ್ತು ಸಂಶೋಧನ’ ಸಮ್ಮೇಳನ (NACCLER 2025) ಆಯೋಜಿಸಿದ್ದ, ಯಶಸ್ವಿಯಾಗಿ ನಡೆಸಿತು. ಈ ಸಮ್ಮೇಳನವು ವಾಗಿತ್ತು. 

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಹೆ, ಮಣಿಪಾಲ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರವಿರಾಜ ಎನ್.ಎಸ್., ‘ಕೌಶಲ್ಯ ಆಧಾರಿತ ತರಬೇತಿ ಎನ್ನುವುದು ಈಗ ಕೇವಲ ಒಂದು ವಿಚಾರವಾಗಿ ಉಳಿದಿಲ್ಲ, ಆರೋಗ್ಯ ಸಂಬಂಧಿತ ನುರಿತ ವೃತ್ತಿಪರರನ್ನು ಸೃಷ್ಟಿಸುವ ಅಡಿಪಾಯವಾಗಿದೆ. ಇಂದು ಶರ ವೇಗದಲ್ಲಿ ವಿಕಾಸಗೊಳ್ಳುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ, ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತಾಂತ್ರಿಕ ಪರಿಣತಿ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಸಹಯೋಗ ಅತ್ಯಗತ್ಯ. ಈ ಸಮನ್ವಯವನ್ನು ಪ್ರೋತ್ಸಾಹಿಸುವಲ್ಲಿ ಮಾಹೆ ಬದ್ಧವಾಗಿದೆ. ನಮ್ಮಲ್ಲಿ ಓದಿದ ವಿದ್ಯಾರ್ಥಿಗಳು ಕೇವಲ ಡಿಗ್ರಿ ಪಡೆದವರಷ್ಟೇ ಆಗಿರದೆ, ಮೊದಲ ದಿನದಿಂದಲೇ ಆರೋಗ್ಯ ಕ್ಷೇತ್ರದ ಉನ್ನತಿಗಾಗಿ ಕೊಡುಗೆ ನೀಡಲು ಸಿದ್ದವಾಗಿರುವ ನುರಿತು ವೃತ್ತಿಪರರಾಗಿರುತ್ತಾರೆ’ ಎಂದರು. 

MCHP ಡೀನ್ ಡಾ. ಜಿ. ಅರುಣ್ ಮೈಯಾ, ‘ನೈಜ ಸವಾಲುಗಳನ್ನು ಎದುರಿಸುವ ಆರೋಗ್ಯಕ್ಷೇತ್ರದ ಪರಿಹಾರ ನೀಡುವುದು ಮುಂದುವರೆಸಲು ಉದ್ಯಮ-ಶೈಕ್ಷಣಿಕ ಪಾಲುದಾರಿಕೆ ಅತ್ಯಗತ್ಯ ಎನ್ನುವುದನ್ನು MCHP ನಂಬುತ್ತದೆ. ಶೈಕ್ಷಣಿಕ ಜ್ಞಾನವು ಪ್ರಾಯೋಗಿಕ ಆವಿಷ್ಕಾರಗಳಾಗಿ ಪರಿವರ್ತನೆಗೊಳ್ಳುವಲ್ಲಿ, ಸಂಶೋಧನೆಗಳು ಜನರಿಗೆ ಉಪಯೋಗವಾಗುವಲ್ಲಿ ಈ ರೀತಿಯ ಸಹಯೋಗಗಳು ನಿಕಟ ಪರಿಸರವನ್ನು ಸೃಷ್ಟಿಸುತ್ತವೆ’ ಎಂದು ಹೇಳಿದರು. 

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸರಿತಾ ಕಾಮತ್ ಯು. ಸ್ವಾಗತ ಕೋರಿದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಕಲೈವಾಣಿ ಎಂ. ಅವರು ಸಮ್ಮೇಳನದ ಅವಲೋಕನ ನೀಡಿದರು, ಸಹ-ಸಂಘಟನಾ ಕಾರ್ಯದರ್ಶಿ ಡಾ. ಅಂಜು ಎಂ. ಧನ್ಯವಾದ ಹೇಳಿದರು.