Header Ads Widget

ಸಾಮಗಾನ ಉದ್ಘಾಟನೆ

ಸಾಮಗ ಬಂಧು ಮಿತ್ರರು ಹಾಗೂ ಮಿತ್ರ ಕೂಟ ಉಡುಪಿ ಇವರ ಸಹಯೋಗದಲ್ಲಿ ದಿನಾಂಕ 30 ಮೇ ಶುಕ್ರವಾರ ಸಂಜೆ ಸಾಮಗಾನ ಉದ್ಘಾಟನೆ. ವಿಶ್ವಾವ ಸು ಸಂವತ್ಸರ ಜೇಷ್ಠ ಶುಕ್ಲ ಚೌತಿ ಸಂಜೆ 3.45ಕ್ಕೆ ಶ್ರೀ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ದೊಡ್ಡ ಸಾಮಗರೆಂದೇ ಪರಿಚಿತ ರಾದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಹರಿಕಥಾ ವಿದ್ವಾಂಸ ಕೀರ್ತಿ ಶೇಷ ಶ್ರೀಮತಿ ಕಮಲಾಕ್ಷಿ ಮತ್ತು ಶ್ರೀ ಮಲ್ಪೆ ಶಂಕರ ನಾರಾಯಣ ಸಾಮಗರ ಸವಿ ನೆನಪಿನಲ್ಲಿ ಕೊಡವೂರು ಲಕ್ಷ್ಮೀ ನಗರ ದಲ್ಲಿ "ಸಾಮ ಗಾನ" ಆದ್ಯಾತ್ಮ ಮತ್ತು ಕಲಾ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಪ್ರೊ ಎಂ. ಎಲ್. ಸಾಮಗ ಅವರೂ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರಿ ಪ್ರಮೋದ್ ಮಧ್ವರಾಜ್, ಶ್ರೀಮತಿ ವಾರಿಜಾ ರಾವ್ ಆದಿ ಉಡುಪಿ, ಹಿರಿಯ ಕವಿ ಶ್ರೀ ಪುಂಡಲೀಕ ನಾಯಕ್, ವೇದಮೂರ್ತಿ ಮುರಳೀ ಉಪಾಧ್ಯಾಯ, ಶ್ರೀ ಆಲ್ವಿನ್ ದಾಂತಿ, ಶಿಕ್ಷಕರು ಮತ್ತು ಟಿವಿ ನಿರೂಪಕರು ಸಂತೆಕಟ್ಟೆ ಹಾಗೂ ನಗರ ಸಭಾ ಸದಸ್ಯ ಶ್ರೀ ವಿಜಯ ಕೊಡವೂರು ಅವರುಭಾಗವಹಿಸಲಿದ್ದಾರೆ. ಶ್ರೀ ಬಿ ರವೀಂದ್ರ ಹೆಬ್ಬಾರ್ ಚಾಂತಾರು ಸಂಚಾಲಕರು ಶಂಕರ ತತ್ತ್ವಪ್ರಚಾರ ಸಮಿತಿ ಮತ್ತು ಸಂಗಡಿಗರಿಂದ ಹಾಗೂ ವಿವಿಧ ಸಂಘಟನೆ ಯ ಸದಸ್ಯರಿಂದ ವಿಷ್ಣು ಸಹಸ್ರ ನಾಮ ಮತ್ತು ಶ್ರೀ ರುದ್ರ ಪಠಣ, ಪರಿಸರದ ಹಿರಿಯರಿಗೆ ಗೌರವಾರ್ಪಣೆ ಹಾಗೂ ಶ್ರೀ ಶಂ ಕುಣಿತ ಭಜನಾ ಮಂಡಳಿ ಲಕ್ಷ್ಮೀನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.