BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ
[ಹೋಮ್] ತಿಂಗಳ ಪಾಪ್ಯುಲರ್ ಸುದ್ದಿಗಳು

Krishna Mata Astami 2026

Krishna Mata Astami 2026
ಸುದ್ದಿ

ಕರ್ವಾಲು ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡು ಅಲೆವೂರು ಕರ್ವಾಲು ಇದರ ವಿದ್ಯಾರ್ಥಿಗಳಿಗೆ ಶ್ರೀ ವಿಷ್ಣು ಸ್ನೇಹ ಬಳಗ ವತಿಯಿಂದ ಶಾಲೆಯ ದತ್ತು ಸ್ವೀಕಾರ ಯೋಜನೆ ಅಂಗವಾಗಿ ದಾನಿಗಳ ನೆರವಿನಿಂದ ಶಾಲಾ ಬ್ಯಾಗ್‌, ಕೊಡೆ ಮತ್ತು ಕಲಿಕಾ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

ಜೂನ್.24 ರಂದು ಶಾಲೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ , ವಿಷ್ಣು ಸ್ನೇಹ ಬಳಗ ಅಧ್ಯಕ್ಷ ಮತ್ತು ಅಲೆವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯಕ್, ಕಳೆದ ಹಲವಾರು ವಷ೯ಗಳಿಂದ ಶಾಲೆಯ ನ್ನು ದತ್ತು ಸ್ವೀಕಾರ ಮಾಡಿ ಮುಚ್ಚುವ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ.ಗ್ರಾಮದಲ್ಲಿ ಶಾಲೆ ಮತ್ತು ದೇವಾಲಯ ಪ್ರಾಮುಖ್ಯವಾಗಿವೆ.ವಿದ್ಯಾಥಿ೯ಗಳು ಉತ್ತಮವಾಗಿ ಅಧ್ಯಯನ ಮಾಡಿ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.

ಶಾಲಾ ಹಳೆ ವಿದ್ಯಾಥಿ೯ ಲೇಖಕ ರಾಘವೇಂದ್ರ ಪ್ರಭು ಕವಾ೯ಲು ಮಾತನಾಡಿ ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾದಾಗ ಶಾಲೆಗೆ ಸಹಾಯ ಹಸ್ತ ನೀಡುವರಂತಾಗಬೇಕು

ನಮ್ಮ ಸಮಾಜದಲ್ಲಿ ಅದೆಷ್ಟು ಯುವಕ ಯುವತಿ ಮಂಡಲಗಳು ಕೇವಲ ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಿವೆ ಆದರೆ ವಿಷ್ಣು ಸ್ನೇಹ ಬಳಗ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಶಾಲೆಯನ್ನು ಉಳಿಸಿ ಬೆಳೆಸುವ ಅಪೂರ್ವವಾದ ಕೆಲಸ ಮಾಡುತ್ತಿವೆ ಇದು ಮಾದರಿಯಾದ ಕಾರ್ಯ ಎಂದರು.

ವಿದ್ಯಾಭಿಮಾನಿ ರಾಮಚಂದ್ರ ನಾಯಕ್ ಶುಭ ಹಾರೈಸಿದರು ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಸಂಪತ್, ಕೇಶವ ಆಚಾರ್ಯ, ಸುರೇಶ್ ನಾಯಕ್, ರಾಘವೇಂದ್ರ ಆಚಾರ್ಯ, ವಿಘ್ನೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸವಿತಾ ಶಾಲೆಯ ಬೆಳವಣಿಗೆಗೆ ಎಲ್ಲಾ ಪೋಷಕರು ಸಹಕರಿಸುವಂತೆ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧನಸಹಾಯ ಮಾಡಿದ ಎಲ್ಲ ದಾನಿಗಳಿಗೆ ಧನ್ಯವಾದ ಸಮರ್ಪಿಸಲಾಯಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!