ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ್ಕೂಟವು, ವಿಶ್ವಕರ್ಮ ಸಹಕಾರಿ ಬ್ಯಾಂಕ್ ನವರ ಪ್ರಾಯೋಜಕತ್ವ ದಲ್ಲಿ ಉಡುಪಿ ಪ್ರೈಮ್ ಸಂಸ್ಥೆ ಯ ಸಹಕಾರ ದೊಂದಿಗೆ ಒಂದು ದಿನದ *ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ* ಇತ್ತೀಚೆಗೆ ಉಡುಪಿ ಪ್ರೈಮ್ ಸಂಸ್ಥೆ ಯಲ್ಲಿ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರೈಮ್ ಸಂಸ್ಥೆ ಯ ಸ್ಥಾಪಕ ರತ್ನ ಕುಮಾರ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಯ ಅವಶ್ಯಕತೆ ಯ ಕುರಿತು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.ಪ್ರೈಮ್ ಸಂಸ್ಥೆ ಯ ನಿರ್ದೇಶಕ ಗೋಪಾಲಕೃಷ್ಣ ಸಾಮಗ ಒಕ್ಕೂಟದ ಗೌರವಾಧ್ಯಕ್ಷ ಯು.ಕೆ.ಯಸ್ ಸೀತಾರಾಮ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಕೋಶಾಧಿಕಾರಿ ಜನಾರ್ದನ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಅಗತ್ಯವೇನೆಂಬುದರ ಬಗ್ಗೆ ತನ್ನ ಅಧ್ಯಕ್ಷೀಯ ಭಾಷಣ ದಲ್ಲಿ ಅಧ್ಯಕ್ಷರು ವಿವರಿಸಿದರು.ಸಂಚಾಲಕ ಹರ್ಷವರ್ಧನ ನಿಟ್ಟೆ ಸ್ವಾಗತ ಗೈದರು ಪ್ರಧಾನ ಕಾರ್ಯದರ್ಶಿ ಕೆ.ಮುರಳೀಧರ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.ಜಯರಾಮ ಆಚಾರ್ಯ ಸಾಲಿಗ್ರಾಮ ಪ್ರಾರ್ಥನೆ ಗೈದರು.ಪ್ರೊಪೆಸರ್ ಪ್ರಶಾಂತ ನೀಲಾವರ ಮತ್ತು ರಾಮಕೃಷ್ಣ ಪೈ ಯವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗ ದರ್ಶನ ನೀಡಿದರು. ಪಾಂಡುರಂಗ ಆಚಾರ್ಯ ಸಾಲಿಗ್ರಾಮ ಹಾಜರಾದ ವಿದ್ಯಾರ್ಥಿಗಳಿಗೆ ಭಾಗವಹಿಸುವಿಕೆ ಧೃಡಪತ್ರ ವಿತರಿಸಿ ಶುಭಹಾರೈಸಿದರು.ಪ್ರಕಾಶ ಆಚಾರ್ಯ ನೇರಂಬಳ್ಳಿ ವಂದನಾರ್ಪಣೆ ಸಲ್ಲಿಸಿದರು.ಒಕ್ಕೂಟದ ಸದಸ್ಯರಾದ ವಕ್ವಾಡಿ ಆನಂದ ಆಚಾರ್ಯ, ಅರುಣ್ ಆಚಾರ್ಯ, ಯೋಗೀಶ್ ಆಚಾರ್ಯ ಮುಡಿಪು,ಪ್ರತಿಮಾ ಜಯಪ್ರಕಾಶ್, ಗಂಗಾಧರ ಆಚಾರ್ಯ, ಸುನೀತಾ ದಿವಾಕರ್ ಪ್ರೈಮ್ ಸಂಸ್ಥೆ ಯ ಉದಯ ಕುಮಾರ್ ರವರು ಸಹಕರಿಸಿದರು. ಅಪರಾಹ್ನ ಸಮಾರೋಪ ಸಮಾರಂಭ ಜರಗಿತು.